Tuesday, June 23, 2026
spot_imgspot_img
spot_imgspot_img

ಮಂಗಳೂರು: ಕೈಗಾರಿಕ ವಲಯದ ತ್ಯಾಜ್ಯದಿಂದ ಕಲುಷಿತಗೊಂಡ ಪಲ್ಗುಣಿ ನದಿ; ಅಪಾರ ಸಂಖ್ಯೆಯಲ್ಲಿ ಸತ್ತು ಬಿದ್ದ ಮೀನು

- Advertisement -
- Advertisement -

ಮಂಗಳೂರು: ನಗರ ಹೊರವಲಯದ ಮರವೂರು ಸಮೀಪ ಪಲ್ಗುಣಿ ನದಿಯಲ್ಲಿ ವಿಷ ತ್ಯಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಮೀನುಗಳು ಸತ್ತು ಬಿದ್ದಿವೆ. ನೀರು ಕೆಟ್ಟ ರೀತಿಯಲ್ಲಿ ವಾಸನೆ ಬರುತ್ತಿದ್ದು ಸದ್ಯ ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ನದಿ ತಟದ ಬಾವಿಗಳ ನೀರು ಕಳೆದೆರಡು ದಿನಗಳಿಂದ ಕಲುಷಿತಗೊಂಡಿದ್ದು , ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದು ಬೈಕಂಪಾಡಿ ಕೈಗಾರಿಕಾ ವಲಯದಿಂದ ಸೇರುವ ತೋಕೂರು ಹಳ್ಳದ ತ್ಯಾಜ್ಯ ಎನ್ನಲಾಗುತ್ತಿದೆ. ಇದೇ ನದಿಯಿಂದ ಗುರುಪುರ, ಕಂದಾವರ, ಗಂಜಿಮಠ ಮತ್ತು ಪಡುಪೆರಾರ ಗ್ರಾಪಂಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕಳೆದ ಒಂದು ದಶಕದಿಂದ ಇಂತಹ ಘಟನೆಗಳು ಈ ಪ್ರದೇಶದಲ್ಲಿ ಮತ್ತೆ ಮರುಕಳಿಸುತ್ತಿದೆ ಎಂದು ಸ್ಥ ಳೀಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಗ್ರಾಮಪಂಚಾಯ್, ತಹಶೀಲ್ದಾರ್ ಸೇರಿ ಎಲ್ಲರಿಗೂ ದೂರು ನೀಡುತ್ತಿದ್ದರೂ ಯಾವುದೇ ಕ್ರಮ ಆಗುತ್ತಿಲ್ಲವೆಂದು ಕಿಡಿಕಾರಿದ್ದಾರೆ.

ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

vtv vitla
- Advertisement -

Related news

error: Content is protected !!