Thursday, June 18, 2026
spot_imgspot_img
spot_imgspot_img

ಮಂಗಳೂರು: ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಟಿಕೆಟ್ ನಲ್ಲಿ ನಂಬರ್ ಬರೆದುಕೊಟ್ಟ ಕಂಡಕ್ಟರ್; ಆರೋಪಿ ಬಂಧನ

- Advertisement -
- Advertisement -

ಮಂಗಳೂರು: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಟಿಕೆಟ್ ನಲ್ಲಿ ನಂಬರ್ ಬರೆದುಕೊಟ್ಟ ಕಂಡಕ್ಟ‌ರ್‍ ಓರ್ವನನ್ನು ಬಜ್ಪೆ ಪೊಲೀ ಸರು ಬಂಧಿಸಿದ್ದಾರೆ. ಗುರುಪುರ ನಿವಾಸಿ ಮಹಮ್ಮದ್ ಆಜ್ಮಲ್ (32) ಬಂಧಿತ ಆರೋಪಿ.

ಮಂಗಳೂರಿನಿಂದ ಮೂಡಬಿದ್ರೆ ಸಾಗುವ ಖಾಸಗಿ ಬಸ್ ನಲ್ಲಿ ಯುವತಿಯೊಬ್ಬಳು ಪ್ರಯಾಣಿಸುತ್ತಿದ್ದಳು. ಈ ವೇಳೆ ನಿರ್ವಾಹಕ ಟಿಕೆಟ್ ನೀಡುವಾಗ ಯುವತಿಯ ಬಳಿ ತನ್ನ ಮೊಬೈಲ್ ನಂಬರ್ ತೆಗೆದುಕೊಳ್ಳುವಂತೆ ಹೇಳಿದ್ದಾನೆ. ಆದರೆ ಯುವತಿ ನಿರಾಕರಿಸಿದ್ದಾಳೆ, ಆಗ ನಿರ್ವಾಹಕ ಮಹಮ್ಮದ್‌ ಅಜ್ಮಲ್ ಟಿಕೆಟ್ ನಲ್ಲಿ ತನ್ನ ನಂಬರ್‌ ಬರೆದು ಯುವತಿಯ ಕೈಗೆ ಬಲವಂತವಾಗಿ ತುರುಕಿದ್ದಾನೆ.

ಕೂಡಲೇ ಯುವಕಿ ಬಸ್ ನಲ್ಲಿದ್ದವರ ಸಹಾಯ ಕೇಳಿದ್ದಾಳೆ, ಸಹಾಯಕ್ಕೆ ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರು ಬಜಪೆ ಠಾಣೆಯಲ್ಲಿ ಯುವತಿಯಿಂದ ದೂರು ದಾಖಲಿಸಿದ್ದಾರೆ. ಪೊಲೀಸರು ಗುರುಪುರದ ಕೈಕಂಬ ಎಂಬಲ್ಲಿ ಬಸ್ ತಡೆದು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!