Monday, June 15, 2026
spot_imgspot_img
spot_imgspot_img

ಮಂಗಳೂರು: ತಂದೆಯೇ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ; ಆಸ್ಪತ್ರೆಗೆ ದಾಖಲಾಗಿದ್ದ 25ರ ಹರೆಯದ ಪುತ್ರ ಸಾವು

- Advertisement -
- Advertisement -

ಮಂಗಳೂರು: ಜನ್ಮ ಕೊಟ್ಟ ತಂದೆಯೇ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ. ಸುಟ್ಟ ಗಾಯದೊಂದಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ನತದೃಷ್ಟ ಪುತ್ರ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ಹೊರವಲಯದ ಜಪ್ಪಿನಮೊಗರು ಕೊಪ್ಪರಿಗೆಗುತ್ತು ಎಂಬಲ್ಲಿ ಜೂ.21ರಂದು ರಾತ್ರಿ ದನ ಕಟ್ಟುವ ವಿಚಾರದಲ್ಲಿ ಕೋಪಗೊಂಡ ವಿಶ್ವನಾಥ ಶೆಟ್ಟಿ ತನ್ನ ಪುತ್ರ ಸ್ವಾಮೀತ್ ಶೆಟ್ಟಿ(25) ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದರಿಂದ ಸುಟ್ಟಗಾಯಗಳಾಗಿದ್ದರಿಂದ ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀತ್ ಶೆಟ್ಟಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!