Friday, March 29, 2024
spot_imgspot_img
spot_imgspot_img

ಮಂಗಳೂರು: ತುಳು, ಬ್ಯಾರಿ, ಕೊಂಕಣಿ ಭಾಷಾ ಅಕಾಡೆಮಿ ಅಧ್ಯಕ್ಷರಿಂದ ಲಾಕ್ ಡೌನ್ ಸಮಯದಲ್ಲಿ ಪ್ರಯಾಣ ಭತ್ಯೆ ಸ್ವೀಕಾರ ಆರೋಪ!

- Advertisement -G L Acharya panikkar
- Advertisement -

ಮಂಗಳೂರು: ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಕರಾವಳಿಯ ತುಳು,ಬ್ಯಾರಿ,ಕೊಂಕಣಿ ಮೂರು ಭಾಷಾ ಅಕಾಡೆಮಿಗಳ ಅಧ್ಯಕ್ಷರು ಪ್ರಯಾಣ ಭತ್ಯೆ ಸ್ವೀಕರಿಸಿರುವ ಬಗ್ಗೆ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ , ಸಾಹಿತಿ ಡಾ.ಅರವಿಂದ ಚಂದ್ರಕಾಂತ ಶ್ಯಾನಭಾಗ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಬೆಳಕಿಗೆ ತಂದಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ಅಕಾಡೆಮಿಗಳಿಗೆ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ಇರಲಿಲ್ಲ,ಕಛೇರಿ ತೆರೆಯಲೂ ಅವಕಾಶವಿರಲಿಲ್ಲ. ವಾಹನಗಳ ಓಡಾಟಕ್ಕೂ ನಿರ್ಬಂಧಿಸಲಾಗಿತ್ತು. ಆದರೆ ತುಳು,ಬ್ಯಾರಿ,ಕೊಂಕಣಿ ಅಕಾಡೆಮಿಗಳ ಅಧ್ಯಕ್ಷರು ಮನೆಯಲ್ಲಿಯೇ ಕುಳಿತು ಸಾಹಿತ್ಯಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಲಕ್ಷಗಟ್ಟಲೆ ಮೊತ್ತದ ಪ್ರಯಾಣ ಭತ್ಯೆಯನ್ನು ಪಡೆದಿದ್ದಾರೆ ಎಂದು ಅವರು ದಾಖಲೆ ಸಮೇತ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: 23ನೇ ವಯಸ್ಸಿನಲ್ಲಿ 300 ಮಹಿಳೆಯರಿಗೆ ವಂಚಿಸಿದ ರಸಿಕ ರಾಜ

ಈ ಸಮಯದಲ್ಲಿ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಸಂವಾದಗಳು ನಡೆಸಲಾಗಿದೆ. ಹೀಗಿರುವಾಗ ತಿಂಗಳಿಗೆ ಬರೋಬ್ಬರಿ 30,000 ರುಪಾಯಿಗಳಂತೆ ವಿವಿಧ ಟ್ರಾವೆಲ್ಸ್ ಸಂಸ್ಥೆಗಳ ಹೆಸರಿನಲ್ಲಿ ಪ್ರಯಾಣ ಭತ್ಯೆಯನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಡಾ.ಅರವಿಂದ ಶ್ಯಾನಭಾಗ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2020ರ ಏಪ್ರಿಲ್/ ಮೇ ತಿಂಗಳಲ್ಲಿ ಈ ಸಮಯದಲ್ಲಿ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಸಂವಾದಗಳು ನಡೆಸಲಾಗಿದೆ. ಹೀಗಿರುವಾಗ ಈ ಅಕಾಡೆಮಿಗಳ ಅಧ್ಯಕ್ಷರು ಎಲ್ಲಿಗೂ ಪ್ರಯಾಣಿಸದೆ ವಿವಿಧ ಟ್ರಾವೆಲ್ಸ್ ಸಂಸ್ಥೆಗಳ ಹೆಸರಿನಲ್ಲಿ ಮನೆಯಲ್ಲೇ ಕುಳಿತ ತಿಂಗಳಿಗೆ 30,000 ಎರಡೂವರೆ ತಿಂಗಳಿಗೆ 75,000 ರೂ ವೆಚ್ಚವನ್ನು ತೋರಿಸಿ ರೂಪಾಯಿಯಂತೆ ಪ್ರಯಾಣ ಭತ್ಯೆ ಸ್ವೀಕರಿಸಿದರು.

ಇದನ್ನೂ ಓದಿ: ಮಂಗಳೂರು: ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ; 6 ಕೋಳಿ, ನಗದು ಹಾಗೂ ದ್ವಿಚಕ್ರ ವಾಹನ ಸಹಿತ ನಾಲ್ವರು ವಶಕ್ಕೆ

ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಇವರು ಶ್ರೇಯಾನ್ ಎಂಟರ್ಪ್ರೈಸಸ್ ಹೆಸರಿನಲ್ಲಿ, ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಡಾ| ಜಗದೀಶ್ ಪೈ , ಸಾನು ಟ್ರಾವೆಲ್ಸ್ ಹೆಸರಿನಲ್ಲಿ, ಬ್ಯಾರಿ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ ಇವರು ಮುಹಮ್ಮದ್ ಹಕೀಂ ಹೆಸರಿನಲ್ಲಿ ಅಕ್ರಮವಾಗಿ ಪಡೆದು, ಸರಕಾರದ ಬೊಕ್ಕಸ ಖಾಲಿ ಮಾಡಿದ್ದಾರೆ ಎಂದು ಡಾ.ಅರವಿಂದ ಶ್ಯಾನಭಾಗ ಆರೋಪಿಸಿದ್ದಾರೆ.

ಈ ಅಕಾಡೆಮಿಗಳ ಅಧ್ಯಕ್ಷರು ಲಾಕ್ ಡೌನ್ ಸಮಯದಲ್ಲಿ ಪ್ರವಾಸ ಮಾಡಿರುವುದೇ ಆದಲ್ಲಿ ದಾಖಲೆಗಳನ್ನು ಬಹಿರಂಗ ಪಡಿಸಲಿ ಇಲ್ಲವಾದರೆ ಅಕ್ರಮವಾಗಿ ಪಡೆದ ಹಣವನ್ನು ಸರಕಾರದ ಖಜಾನೆಗೆ ಮರು ಪಾವತಿಸಲಿ ಎಂದು ಡಾ| ಅರವಿಂದ ಶ್ಯಾನಭಾಗ ಸವಾಲು ಹಾಕಿದ್ದಾರೆ ‌ಅಲ್ಲದೆ ಈ ಬಗ್ಗೆ ಸಮಗ್ರ ತನಿಖೆಯಾಗಲು ಒತ್ತಾಯಿಸಿದ್ದಾರೆ.

driving

- Advertisement -

Related news

error: Content is protected !!