Sunday, April 28, 2024
spot_imgspot_img
spot_imgspot_img

ಐದು ವರ್ಷದ ಮಗುವನ್ನು ಕೊಂದು ತಲೆ ಬುರುಡೆಯನ್ನು ಬೇಯಿಸಿ ತಿಂದ ತಾಯಿ..!

- Advertisement -G L Acharya panikkar
- Advertisement -
vtv vitla

ಹೆತ್ತ ತಾಯಿಯೇ ತನ್ನ ಐದು ವರ್ಷದ ಮಗನನ್ನು ಕೊಂದು, ಬೇಯಿಸಿ ತಿಂದಿರುವ ವಿಚಿತ್ರ ಘಟನೆ ಈಜಿಪ್ಟ್‌ನಲ್ಲಿ ನಡೆದಿದೆ.

ಫಾಕೊಸ್‌ ಸೆಂಟರ್‌ ಬಳಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಹನಾ (29) ಎಂಬ ಮಹಿಳೆ ಮೂರು ವರ್ಷಗಳ ಹಿಂದೆ ಗಂಡನಿಂದ ದೂರವಾಗಿದ್ದು, ಐದು ವರ್ಷದ ಮಗನೊಂದಿಗೆ ಜೀವನ ನಡೆಸುತ್ತಿದ್ದಳು. ಆಕೆ ಇತ್ತೀಚೆಗೆ ತನ್ನ ಜತೆ ಇದ್ದ ಏಕೈಕ ಮಗನನ್ನು ಕೊಂದಿದ್ದಾಳೆ. ಸಾಲದೆಂಬಂತೆ ಕ್ರೂರವಾಗಿ ಮಗನ ದೇಹವನ್ನು ಬೇಯಿಸಿದ್ದಾಳೆ. ಬಳಿಕ ಶವದ ತಲೆಯ ಭಾಗವನ್ನು ತಿಂದಿದ್ದಾಳೆ.

ತನಿಖೆ ನಡೆಸಿರುವ ಪೊಲೀಸರಿಗೆ ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವಿಚಾರ ತಿಳಿದುಬಂದಿದೆ. ಮಗನ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ನಡೆಸಲು ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಶೇಷ ಪ್ರಕರಣದ ಸುದ್ದಿ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಈ ವಿಚಾರ ಪೊಲೀಸರ ಕಿವಿಗೆ ಬಿದ್ದಿದೆ. ಪೊಲೀಸರು ಮನೆಗೆ ಹೋಗಿ ಪರಿಶೀಲನೆ ಮಾಡಿದಾಗ ಮಗನ ದೇಹವನ್ನು ಬಕೆಟ್‌ ಒಂದರಲ್ಲಿ ತುಂಬಿಟ್ಟಿರುವುದು ಕಂಡುಬಂದಿದೆ. ತಕ್ಷಣ ಹನಾರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ. ಆಗ ಆಕೆ ತನ್ನ ಮಗನನ್ನು ತಾನೇ ಕೊಂದು, ಬೇಯಿಸಿ ತಿಂದಿದ್ದಾಗಿ ಹೇಳಿದ್ದಾಳೆ. ತಲೆ ಭಾಗವನ್ನು ತಿಂದರೆ ಮಗ ಶಾಶ್ವತವಾಗಿ ತನ್ನೊಂದಿಗೇ ಇರುತ್ತಾನೆ ಎಂದು ಭಾವಿಸಿ ಆಕೆ ಆ ರೀತಿಯಲ್ಲಿ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.

- Advertisement -

Related news

error: Content is protected !!