Monday, July 20, 2026
spot_imgspot_img
spot_imgspot_img

ಮಂಗಳೂರು: ದರ್ಗಾ ಕೆಡವಿದಾಗ ದೇವಸ್ಥಾನ ಪತ್ತೆ ಪ್ರಕರಣ; ಹಿಂದೂ ಸಂಘಟನೆಗಳಿಂದ ಅಷ್ಟಮಂಗಲ ಪ್ರಶ್ನೆಗೆ ಚಿಂತನೆ.!

- Advertisement -
- Advertisement -

ಮಂಗಳೂರು: ಮಂಗಳೂರು ಹೊರವಲಯದ ಗಂಜಿಮಠದಲ್ಲಿ ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆಯಾಗಿರುವ ವಿಚಾರದಲ್ಲಿ ಅಷ್ಟಮಂಗಲ ಪ್ರಶ್ನೆಯ ಮೊರೆ ಹೋಗಲು ಚಿಂತನೆ ನಡೆದಿದೆ.

ದರ್ಗಾ ಇರುವ ಜಾಗದಲ್ಲಿ ದೇವಸ್ಥಾನ ಇತ್ತು ಎಂದು ವಿಶ್ವ ಹಿಂದೂ ಪರಿಷತ್ ವಾದಿಸಿದ್ದು, ಈಗಾಗಲೇ ಹಳೆಯ ಭೂ ದಾಖಲೆಗಳ ಪರಿಶೀಲನೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ನಡೆಸುತ್ತಿದೆ. ಸದ್ಯ ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ನವೀಕರಣ ಕಾಮಗಾರಿ ಸ್ಥಗಿತಗೊಂಡಿದ್ದು, ನವೀಕರಣದ ಸಲುವಾಗಿ ಮುಂಭಾಗ ಕೆಡವಲಾಗಿತ್ತು.

ಸದ್ಯ ಅದು ದರ್ಗಾವೇ, ದೇವಸ್ಥಾನವೇ ಅಥವಾ ಬಸದಿಯೇ ಎಂಬ ಬಗ್ಗೆ ಗೊಂದಲ ಇದ್ದು, ಅಷ್ಟಮಂಗಲ ಪ್ರಶ್ನೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಚಿಂತನೆ ನಡೆಸಿವೆ ಎಂದು ಹೇಳಲಾಗಿದೆ. ಕೋರ್ಟ್ ನಿಂದ ದರ್ಗಾ ಕಾಮಗಾರಿಗೆ ತಡೆಯಾಜ್ಞೆ ಇದ್ದು, ಅಷ್ಟ ಮಂಗಲ ಪ್ರಶ್ನೆಯ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಾಗಿದೆ ಎನ್ನಲಾಗಿದೆ.

ಮಂಗಳೂರು: ದರ್ಗಾ ಕೆಡವಿದಾಗ ದೇವಾಲಯ ಪತ್ತೆ..!

- Advertisement -

Related news

error: Content is protected !!