Thursday, May 2, 2024
spot_imgspot_img
spot_imgspot_img

ಮಂಗಳೂರು: ದರ್ಗಾ ಕೆಡವಿದಾಗ ದೇವಾಲಯ ಪತ್ತೆ..!

- Advertisement -G L Acharya panikkar
- Advertisement -

ಮಂಗಳೂರು: ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನದ ಗುಡಿ ಪತ್ತೆಯಾದ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಗುಡಿ ಪತ್ತೆಯಾಗಿದೆ.

ಗುಡಿ ಪತ್ತೆಯಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಮಂಗಳೂರು ತಹಸೀಲ್ದಾರ್ ಪುರಂದರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಪ್ರಮುಖರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮತ್ತೆ ಮತ್ತೆ ಬಯಲಾಗುತ್ತಿದೆ ಮಸೀದಿಯೊಳಗಿನ ರಹಸ್ಯ..!
ಮಸೀದಿಯೊಳಗೆ ದೇವಾಲಯ ಪತ್ತೆ ಇದೇ ಮೊದಲಲ್ಲ. ಇದಕ್ಕಿಂತಲೂ ಮೊದಲು ರಾಜ್ಯದಲ್ಲಿ ದೇಶದಲ್ಲಿ ಇಂತಹ ಘಟನೆ ನಡೆದಿತ್ತು. ಕಾಶಿ ಕಾರಿಡಾರ್ ನಿರ್ಮಾಣ ಮಾಡುವ ಸಮಯದಲ್ಲೂ ದೇವಾಲಯಗಳು ಪತ್ತೆಯಾಗಿತ್ತು. ಇನ್ನು ತಾಜ್ ಮಹಲ್ ಕೂಡ ಶಿವನ ಆಲಯ ಎಂದು ಅನೇಕ ಇತಿಹಾಸ ಶಾಸ್ತ್ರಜ್ಞರು ಇಂದಿಗೂ ವಾದ ಮಂಡಿಸುತ್ತಿದ್ದಾರೆ.

ಕಾಮಗಾರಿ ಕೆಲಸ ಕಾರ್ಯಕ್ಕೆ ಬ್ರೇಕ್..!
ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕಲು ತಹಶೀಲ್ದಾರ್ ಮುಂದಾಗಿದ್ದಾರೆ. ಸದ್ಯ ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಸೂಚನೆ ನೀಡಿದ್ದು, ಕೆಲಸ ಸ್ಥಗಿತಗೊಳಿಸಿ ಜಿಲ್ಲಾಡಳಿತದ ನಿರ್ಧಾರಕ್ಕೆ ದರ್ಗಾ ಆಡಳಿತ ಸಮ್ಮತಿ ಸೂಚಿಸಿದೆ.

- Advertisement -

Related news

error: Content is protected !!