Thursday, June 18, 2026
spot_imgspot_img
spot_imgspot_img

ಮಂಗಳೂರು: ಪಾದಚಾರಿ ಮಹಿಳೆಗೆ ಬಸ್ಸು ಡಿಕ್ಕಿಯಾಗಿ ಮೃತ್ಯು – ಬಸ್ಸು ಚಾಲಕ ಸೆರೆ

- Advertisement -
- Advertisement -

ಮಂಗಳೂರು: ಬಸ್ಸನ್ನು ರಸ್ತೆಯ ವಿರುದ್ದ ದಿಕ್ಕಿನಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಗಾಯಾಳು ಅಸುನೀಗಿದ ಪ್ರಕರಣಕ್ಕೆ ಸಂಬಂಧಿಸಿ ಬಸ್ಸಿನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತ ಡಿ. ೦೩ ರಂದು ನಡೆದಿದ್ದು ಗಂಭೀರ ಗಾಯಗೊಂಡ ಮೇಘಾ ಅವರು ಡಿ ೦೬ ರಂದು ಮೃತಪಟ್ಟಿದ್ದರು.

ಮಂಗಳೂರಿನ ಕೊಟ್ಟಾರ ಚೌಕಿ ಸಮೀಪದ ಕಲ್ಲುರ್ಟಿ ದೈವಸ್ಥಾನದ ಎದುರು ರಸ್ತೆ ದಾಟುತ್ತಿದ್ದಾಗ ಬಸ್ ಢಿಕ್ಕಿ‌ಯಾಗಿ ಮೇಘಾ ರಂಜಿತ್ ಪೈ (34) ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಸ್ ಚಾಲಕ ಪದವಿನಂಗಡಿಯ ಶರಣ್ ಕುಮಾರ್ (35) ಎಂಬಾತನನ್ನು ಸಂಚಾರ ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 304ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಡಿ.17ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!