Monday, May 6, 2024
spot_imgspot_img
spot_imgspot_img

ಮಂಗಳೂರು: ಬಡ ಬಾಲಕಿಯ ಚಿಕಿತ್ಸೆಗೆ ವೇಷ ಧರಿಸಿ 10ಲಕ್ಷ.ರೂ ಸಂಗ್ರಹಿಸಿ ಕೊಟ್ಟ ಯೂಟ್ಯೂಬರ್

- Advertisement -G L Acharya panikkar
- Advertisement -

ಮಂಗಳೂರು: ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕಿಯ ನೆರವಿಗೆ ಕರಾವಳಿಯ ಪ್ರಖ್ಯಾತ ಯೂಟ್ಯೂಬರ್ ಉಡುಪಿಯ ಶಟರ್ ಬಾಕ್ಸ್ ಫಿಲಂಸ್ ಖ್ಯಾತಿಯ ಸಚಿನ್ ಶೆಟ್ಟಿಯ ತಂಡ ವಿಶೇಷ ಪ್ರಯತ್ನದ ಮೂಲಕ ನೆರವು ನೀಡಿದೆ. ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಯಕ್ಷಗಾನ ವೇಷವನ್ನು ಧರಿಸಿ ಒಂದೇ ದಿನದಲ್ಲಿ ಹತ್ತು ಲಕ್ಷರೂಪಾಯಿ ಸಂಗ್ರಹಿಸಿ ಬಾಲಕಿಗೆ ನೆರವು ನೀಡಿದ್ದಾರೆ.

ವೃತ್ತಿಯಲ್ಲಿ ಸಿನಿಮಾಟೋಗ್ರಫಿ ಮತ್ತು ಪೃವೃತ್ತಿಯಲ್ಲಿ ಬೈಕ್ ರೈಡರ್,ಅಡ್ವೆಂಚರ್ಸ್ ಆಗಿರುವ ಕಾಪು ಮೂಲದ ಸಚಿನ್ ಶೆಟ್ಟಿ ಶಟರ್ ಬಾಕ್ಸ್ ಫಿಲಂಸ್ ಎಂಬ ಯೂಟ್ಯೂಬ್ ಚಾನೆಲ್ ನ್ನೂ ಹೊಂದಿದ್ದು ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿಯ ಕುಚ್ಚೂರು ಗ್ರಾಮದ ಚಂದ್ರ ನಾಯ್ಕ್ ಎಂಬುವವರ ಹತ್ತು ವರ್ಷದ ಸಾನ್ವಿ ಎನ್ನುವ ಬಾಲಕಿ “ತಲಾಸೆಮಿಯಾ ಮೇಜರ್” ಎನ್ನುವ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದು “ಬೋನ್ ಮೆರೋವ್ ಟ್ರಾನ್ಸ್ ಪ್ಲಾಂಟ್” ಎನ್ನುವ ಚಿಕಿತ್ಸೆ ಮಾಡಬೇಕಿದ್ದು,ಈ ಚಿಕಿತ್ಸೆಗೆ 40 ಲಕ್ಷ ರೂಪಾಯಿ ಬೇಕಾಗಿದೆ. ಬಡ ಕುಟುಂಬದ ಸಾನ್ವಿ ಹೆತ್ತವರಿಗೆ ಅಷ್ಟು ದೊಡ್ಡ ಮಟ್ಟದ ಹಣ ಹೊಂದಿಸೋದು ಅಸಾಧ್ಯವಾಗಿದೆ. ಮನೆಯ ಬೆಳಕಾಗಿದ್ದ ಮಗಳ ಚಿಕಿತ್ಸೆಗೆ ಹಣ ಹೊಂದಿಸೋದರ ಬಗ್ಗೆಯೇ ಚಿಂತಾಕ್ರಾಂತರಾದ ಸಾನ್ವಿ ಹೆತ್ತವರಿಗೆ ಸಚಿನ್ ಶೆಟ್ಟಿ ಸ್ನೇಹಿತ ವರ್ಗ ಈಗ ನೆರವಾಗಿದೆ.

ಸಮಾಜಮುಖಿ ಕಾರ್ಯದಲ್ಲೂ ತೊಡಗಿಕೊಂಡಿರುವ ಸಚಿನ್ ಶೆಟ್ಟಿ ಪುಟ್ಟ ಮಗುವಿನ ಪ್ರಾಣ ಉಳಿಸಲು ಮಾಡಿದ ಕಾರ್ಯ ಈಗ ಜನರ ಮೆಚ್ಚುಗೆ ಗಳಿಸಿದೆ. ಸಚಿನ್ ಶೆಟ್ಟಿ, ಸುದೀಪ್ ಶೆಟ್ಟಿ,ಚೇತನ್ ಶೆಟ್ಟಿ, ನಿತೀಶ್ ಪೂಜಾರಿ,ಸೇರಿದಂತೆ ಸಚಿನ್ ಶೆಟ್ಟಿ ಸ್ನೇಹಿತರ ವರ್ಗ ಕೃಷ್ಣ ಜನ್ಮಾಷ್ಟಮಿಯ ದಿನದಂದು ಯಕ್ಷಗಾನ ವೇಷ ಧರಿಸಿ ಉಡುಪಿ ಪೇಟೆಯಲ್ಲಿ ಸುತ್ತಾಡಿ ಮಗುವಿಗಾಗಿ ಹಣ ಸಂಗ್ರಹ ಮಾಡಿದೆ.

ಯಕ್ಷಗಾನದ ಮಹಿಷಾಸುರ ವೇಷ, ರಾಕ್ಷಸ ವೇಷವನ್ನು ಧರಿಸಿ,ಜನರ ಬಳಿ ಹೋಗಿ ಸಾನ್ವಿಗಾಗಿ ಸಚಿನ್ ಶೆಟ್ಟಿ ತಂಡ ಧನ ಸಂಗ್ರಹ ಮಾಡಿದೆ. ಒಟ್ಟು 10,51,418 ರೂಪಾಯಿ ಸಂಗ್ರಹ ಮಾಡಲಾಗಿದ್ದು, 1,034,000 ರೂಪಾಯಿ ಒಂದೇ ದಿನದಲ್ಲಿ ಪೇಟೆ ತಿರುಗಾಡಿ ನಗದು ಹಣ ಸಂಗ್ರಹವಾಗಿದೆ. 9,17,418 ರೂಪಾಯಿ ಗೂಗಲ್ ಪೇ ಮೂಲಕ ಸಂಗ್ರವಾಗಿದೆ. ಒಟ್ಟು 10,51,418 ಲಕ್ಷ ರೂಪಾಯಿ ಸಂಗ್ರಹ ಮಾಡಲಾಗಿದ್ದು ರವಿ ಕಟಪಾಡಿ ಮೂಲಕ ಸಾನ್ವಿ ಕುಟುಂಬಕ್ಕೆ ಹಣ ನೀಡಲಾಗಿದೆ.

ರವಿ ಕಟಪಾಡಿ ಪ್ರೇರಣೆ

ರವಿ ಕಟಪಾಡಿ ಕಳೆದ ಏಳು ವರ್ಷಗಳಿಂದ ಪ್ರತಿ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ವಿವಿಧ ವೇಷ ಧರಿಸಿ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಒಟ್ಟು 66 ಮಕ್ಕಳಿಗೆ ಸಹಾಯ ಮಾಡಿದ್ದು,ಒಂದು ಕೋಟಿ ರೂಪಾಯಿ ಸನಿಹ ಧನ ಸಹಾಯ ಮಾಡಿದ್ದಾರೆ.ಹೀಗಾಗಿ ರವಿ ಕಟಪಾಡಿಯವರನ್ನೇ ಸ್ಫೂರ್ತಿಯಾಗಿ ಪಡೆದ ಸಚಿನ್ ಶೆಟ್ಟಿ ತಂಡ ತಾವೂ ವೇಷ ಧರಿಸಿ ಸಾನ್ವಿ ಚಿಕಿತ್ಸೆ ಗೆ ನೆರವಾಗಿದ್ದಾರೆ.ಹೀಗಾಗಿ ತಮಗೆ ಸ್ಫೂರ್ತಿಯಾದ ರವಿ ಕಟಪಾಡಿ ಅವರಿಂದ ಸಾನ್ವಿಗೆ ಧನಸಹಾಯ ಮಾಡಿ ಮಾದರಿಯಾಗಿದ್ದಾರೆ.

- Advertisement -

Related news

error: Content is protected !!