Wednesday, April 24, 2024
spot_imgspot_img
spot_imgspot_img

ಮಂಗಳೂರು: ಬಲವಂತದ ಮತಾಂತರ..! ಹೆರಿಗೆ ತಜ್ಞೆ ಸೇರಿದಂತೆ ಮೂವರ ವಿರುದ್ಧ ಕೇಸು ದಾಖಲು

- Advertisement -G L Acharya panikkar
- Advertisement -

ಮಂಗಳೂರು: ನಗರದ ಖ್ಯಾತ ಹೆರಿಗೆ ತಜ್ಞೆ ಸೇರಿದಂತೆ ಮೂರು ಮಂದಿಯ ವಿರುದ್ಧ ಬಲವಂತದ ಮತಾಂತರ ಆರೋಪ ಕೇಳಿಬಂದಿದೆ. ಈ ಬಗ್ಗೆ ನೊಂದ ೨೦ರ ಹರೆಯದ ಯುವತಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಮತ್ತೊಂದು ಮತಾಂತರ ಪ್ರಕರಣ ಬೆಳಕಿಗೆ ಬಂದಿದ್ದು ಈ ಬಗ್ಗೆ ಹಿಂದೂ ಸಂಘಟನೆಗಳು ಕಿಡಿ ಕಾರಿವೆ. ಈ ಮೂಲಕ ನಗರದಲ್ಲಿ ಸದ್ದಿಲ್ಲದೆ ಮತಾಂತರ ನಡೆಯುತ್ತಿರುವುದಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಂತಾಗಿದೆ. ಖಲೀಲ್ ಎಂಬಾತ ಕೆಲಸ ಹಾಗೂ ಹಣದ ಆಮಿಷವೊಡ್ಡಿ ಮತಾಂತರ ಮಾಡಿದ್ದಲ್ಲದೆ ಜೀವ ಬೆದರಿಕೆ ಒಡ್ಡಿರುವುದಾಗಿ ನೊಂದ ೨೦ರ ಹರೆಯದ ಯುವತಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಖಲೀಲ್ ಕುರಾನ್ ಓದಿಸುಯತ್ತಿದ್ದ..! ಲೈಂಗಿಕ ಕಿರುಕುಳ ನೀಡಿದ್ದಾನೆ – ಗಂಭೀರ ಆರೋಪ
ಹತ್ತನೇ ಕ್ಲಾಸ್ ಬಿಟ್ಟು ಫ್ಯಾನ್ಸಿ ಅಂಗಡಿ ಸೇರಿದ್ದ ತನ್ನನ್ನು ಖಲೀಲ್ ಎಂಬಾತ ಮನವೊಲಿಸಿ ಕಲ್ಲಾಪಿನ ಆತನ ಮನೆಗೆ ಕರೆದೊಯ್ದಿದ್ದ ಅಲ್ಲಿದ್ದ ಆತನ ಸಂಬಂಧಿಕ ಮಹಿಳೆಯರು ಕುರಾನ್ ಓದಲು ಮತ್ತು ನಮಾಜ್ ಮಾಡುವಂತೆ ಬಲವಂತ ಮಾಡಿದ್ದಾರೆ. ಹಣ ಕೊಟ್ಟು ಇಸ್ಲಾಂ ಧರ್ಮಕ್ಕೆ ಸೇರುವಂತೆ ಹೇಳಿ ನಮಾಜ್ ಮಾಡಿಸಿದ್ದಾರೆ. ನನ್ನನ್ನು ಖಲೀಲ್ ಆಟೋದಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆನಂತರ, ಫ್ಯಾನ್ಸಿ ಅಂಗಡಿ ಬಿಟ್ಟು ಬಲ್ಮಠದ ಯೇನಪೋಯ ಆಸ್ಪತ್ರೆ ಮಾಲಕರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದೆ. ಅಲ್ಲಿ ಎಂಟು ತಿಂಗಳ ಕಾಲ ಕೆಲಸ ಮಾಡಿದ್ದೇನೆ.

ಅಲ್ಲಿ ಕೆಲಸ ಮಾಡುತ್ತಿದ್ದಾಗಲೇ ಸೈನಾ ಎಂಬವರು ಪರಿಚಯವಾಗಿ ನನ್ನನ್ನು ಡಾಕ್ಟರ್ ಜಮೀಲಾ ಮತ್ತು ಸೈಯದ್ ಅವರ ಮನೆಗೆ ಕರೆದೊಯ್ದು ಕೆಲಸಕ್ಕೆ ಸೇರಿಸಿದ್ದಾರೆ. ಅಲ್ಲಿ ಎಂಟು ತಿಂಗಳು ಕೆಲಸ ಮಾಡಿದ್ದೇನೆ ಅಲ್ಲಿರುವಾಗಲೇ ಜಮೀಲಾ ಅವರು ನನಗೆ ಬುರ್ಖಾ ಧರಿಸುವಂತೆ ಹೇಳಿದ್ದು ಹೊರಗೆ ಯಾರಾದ್ರೂ ಕೇಳಿದರೆ ಮುಸ್ಲಿಂ ಎಂದು ಹೇಳುವಂತೆ ತಿಳಿಸಿದ್ದರು. ಅಲ್ಲಿ ಬಳಿಕ ಕೆಲಸದ ಒತ್ತಡ ಇದ್ದುದರಿಂದ ಅ.25ಕ್ಕೆ ಕೆಲಸ ಬಿಟ್ಟು ತನ್ನ ಮನೆಗೆ ತೆರಳಿದೆ.

ಜಮೀಲಾ ಅವರ ಮನೆಯಲ್ಲಿದ್ದಾಗಲೇ ಭದ್ರಾವತಿ ಮೂಲದ ಐಮಾನ್ ಎಂಬಾತ ಪರಿಚಯವಾಗಿದ್ದು ಪ್ರೀತಿಸಲು ಒತ್ತಾಯ ಮಾಡಿದ್ದಾನೆ. ಅಲ್ಲದೆ, ಆಗಸ್ಟ್ 30 ರಂದು ತನ್ನ ಮನೆಗೆ ಬರುವಂತೆ ಒತ್ತಾಯ ಮಾಡಿದ್ದ. ಅದರಂತೆ ಆತನ ಭದ್ರಾವತಿಯ ಮನೆಗೆ ಹೋಗಿ ಬಂದಿರುತ್ತೇನೆ. ನನ್ನನ್ನು ಇಸ್ಲಾಂಗೆ ಮತಾಂತರ ಆಗಲು ಪ್ರಯತ್ನ ಪಟ್ಟ ಜಮೀಲಾ, ಐಮಾನ್ ಮತ್ತು ಲೈಂಗಿಕ ಕಿರುಕುಳ ನೀಡಿದ ಖಲೀಲ್ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಯುವತಿ ದೂರು ನೀಡಿದ್ದಾಳೆ.

ನೊಂದ ಯುವತಿ ನೀಡಿದ ದೂರಿನಂತೆ ಪೊಲೀಸರು ಐಪಿಸಿ 354, 354(ಎ), 505, 34 ಹಾಗೂ ಕರ್ನಾಟಕ ಮತಾಂತರ ನಿಷೇಧ ಕಾಯಿದೆ 2022ರ ಕಲಂ 3ಮತ್ತು 5 ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!