Friday, April 26, 2024
spot_imgspot_img
spot_imgspot_img

ಉಡುಪಿ: ವಿವಾಹಿತ ಮಹಿಳೆ ಹೃದಯಾಘಾತದಿಂದ ಕುಸಿದು ಮೃತ್ಯು

- Advertisement -G L Acharya panikkar
- Advertisement -

ಉಡುಪಿ: ಕೋಟ ಪಡುಕರೆ ನಿವಾಸಿ, ವಿವಾಹಿತ ಮಹಿಳೆ ಭವ್ಯ (30) ಹೃದಯಾಘಾತದಿಂದ ಕುಸಿದು ಮೃತಪಟ್ಟ ಘಟನೆ ನಡೆದಿದೆ.

ಮೃತ ವಿವಾಹಿತ ಮಹಿಳೆ ಎಂಎಸ್ಸಿ ಕಲಿತು ಮೂರು ವರ್ಷದ ಹಿಂದೆ ಮಲ್ಪೆಯ ಯುವಕನೊಂದಿಗೆ ವಿವಾಹವಾಗಿದ್ದರು. ಪ್ರಸ್ತುತ ಕೋಟ ಪಡುಕರೆ ಖಾಸಗಿ ಮೀನು ಸಂಸ್ಕರಣಾ ಫ್ಯಾಕ್ಟರಿಯಲ್ಲಿ ಕಛೇರಿ ಕಾರ್ಯ ನಿರ್ವಹಿಸುತ್ತಿದ್ದರು.

ಕಳೆದ ಹಲವು ದಿನಗಳಿಂದ ಹಿಮೋಗ್ಲೋಬಿನ್ ಕಡಿಮೆಯಾಗಿ ವಿಪರೀತ ರಕ್ತಸ್ರಾವವಾಗುತ್ತಿದ್ದ ಕಾರಣ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭವ್ಯ ಸೋಮವಾರ ಗುಣಮುಖವಾಗಿ ಮನೆಗೆ ಬಂದಿದ್ದರು. ಭವ್ಯ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದ ಅವರನ್ನು ತಕ್ಷಣ ಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು.

ಅವರನ್ನು ಪರೀಕ್ಷಿಸಿದ ವೈದ್ಯರು ಭವ್ಯ ಆದಾಗಲೇ ಹೃದಯಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತಿ, ಸಹೋದರ, ತಂದೆ, ತಾಯಿ ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Related news

error: Content is protected !!