Saturday, May 4, 2024
spot_imgspot_img
spot_imgspot_img

ಮಂಗಳೂರು : ಭಾರೀ ಅನಾಹುತ ತಪ್ಪಿಸಿದ 70 ರ ವೃದ್ದೆ ; ಇದೇ ರೈಲ್ವೆ ಹಳಿ ಮೇಲೆ ’ನನ್ನ ಗಂಡ ಸತ್ತಿದ್ದು’ ಎಂದು ಕಣ್ಣೀರಿಟ್ಟ ಅಜ್ಜಿ …!

- Advertisement -G L Acharya panikkar
- Advertisement -

ಮಂಗಳೂರು : ನಗರದ ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ 70ರ ಹರೆಯದ ಮಹಿಳೆಯ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ರೈಲ್ವೇ ಅವಘಡ ತಪ್ಪಿದ್ದು, ಮಹಿಳೆಯ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ರೈಲು ಹಳಿಗೆ ಮರ ಬಿದ್ದಿದ್ದನ್ನು ಗಮನಿಸಿದ 70ರ ಹರೆಯದ ಚಂದ್ರಾವತಿಯವರು, ಅದೇ ವೇಳೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಸಂಚರಿಸುವುದರಲ್ಲಿತ್ತು, ಇದನ್ನು ಗಮನಿಸಿ ತಕ್ಷಣ ಮನೆಗೆ ಓಡಿ ಕೆಂಪು ಬಟ್ಟೆ ತಂದು ಚಂದ್ರಾವತಿಯವರು ರೈಲಿಗೆ ಕೆಂಪು ಬಟ್ಟೆ ಹಿಡಿದಿದ್ದಾರೆ, ಅಪಾಯ ಅರಿತ ಲೋಕೋಪೈಲೆಟ್ ತಕ್ಷಣ ರೈಲು ನಿಲ್ಲಿಸಿದ್ದಾರೆ.

ಅಪಾಯ ಅರಿತ ಲೋಕೋಪೈಲೆಟ್‌ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲನ್ನು ನಿಲ್ಲಿಸಿ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಸುಮಾರು ಅರ್ಧ ತಾಸಿ‌ನ ಬಳಿಕ ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯ ಸಿಬ್ಬಂದಿಗಳು ಸೇರಿ ಮರವನ್ನು ತೆರವು ಮಾಡಿದರು.

ರೈಲು ಅವಘಡ ತಪ್ಪಿಸಲು ಕೆಂಪು ವಸ್ತ್ರ ಹಿಡಿದು ವೃದ್ದೆ ಚಂದ್ರಾವತಿ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಈಕೆಯ ಪತಿ 7, 8 ತಿಂಗಳ ಹಿಂದೆ ರೈಲ್ವೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

- Advertisement -

Related news

error: Content is protected !!