Thursday, December 5, 2024
spot_imgspot_img
spot_imgspot_img

“ಆಂಬ್ಯುಲೆನ್ಸ್ ಖರೀದಿಗೆ ಜಿಲ್ಲಾಡಳಿತಕ್ಕೆ ಚೆಕ್ ಹಸ್ತಾಂತರ”

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಇದರ ವತಿಯಿಂದ ಕೋವಿಡ್-19 ನಿರ್ವಹಣೆಗೆ ಪೂರಕವಾಗಿ ಅಗತ್ಯವಿರುವ ಆಂಬ್ಯುಲೆನ್ಸ್ ಖರೀದಿಸಲು ಜಿಲಾಡಳಿತಕ್ಕೆ 14.50 ಲಕ್ಷದ ಚೆಕ್ ನ್ನು ಮಾನ್ಯ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಸಮ್ಮುಖದಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶೈಲಜಾ ಎ ಕೋಟೆ ಇವರ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಇದರ ಜಿಲ್ಲಾಧ್ಯಕ್ಷರಾದ ಶ್ರೀ ಎಂ ಗಣೇಶ್ ಶೆಟ್ಟಿ,ಮಂಗಳೂರು ತಾಲೂಕು ಅಧ್ಯಕ್ಷರಾದ ಶ್ರೀ ಕೆ.ಟಿ ಸುವರ್ಣ,ಪ್ರಧಾನ ಕಾರ್ಯದರ್ಶಿ ಸಿ ಎಸ್ ಅಪ್ಪಚ್ಚು, ಕೋಶಾಧಿಕಾರಿ ಚಂದ್ರನಾಥ ಅತ್ತಾವರ ,ಜೊತೆ ಕಾರ್ಯದರ್ಶಿ ಓಂ ಪ್ರಸಾದ್ ಉಪಸ್ಥಿತರಿದ್ದರು.

- Advertisement -

Related news

error: Content is protected !!