Thursday, June 4, 2026
spot_imgspot_img
spot_imgspot_img

ಮಂಗಳೂರು: ಮರಕ್ಕೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸಾವು

- Advertisement -
- Advertisement -

ಮಂಗಳೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 169ರ ಗಂಜಿಮಠ ಸೂರಲ್ಪಾಡಿಯ ಎ.ಕೆ.ಉರ್ದು ಶಾಲೆಯ ಬಳಿ ನಿನ್ನೆ ಕಾರು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸೊರಬ ಬೆನ್ನೂರಿನಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ರಾಣಿಬೆನ್ನೂರಿನ ಪುಂಡಲೀಕಪ್ಪ ಅವರಿಗೆ ಚಿಕಿತ್ಸೆಗೆಂದು ವ್ಯಾಗನರ್ ಕಾರಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಬೆನ್ನೂರಿನ ಅಶ್ವಿನಿ,ಅವರ ತಂದೆ ರಾಣಿ ಬೆನ್ನೂರಿನ ಪುಂಡಲೀಕಪ್ಪ (62) ಮೃತ ಪಟ್ಟವರು. ಮೃತ ಅಶ್ವಿನಿ ಅವರ ಪತಿ ಸಂತೋಷ್,ಮಗಳು ಶ್ರೇಯಾ,ತಾಯಿ ಪುಷ್ಪಾ,ಚಾಲಕ ಸೊಹೇಲ್ ಚೇತರಿಸಿಕೊಂಡಿದ್ದಾರೆ.

ಮಂಗಳೂರು ಖಾಸಗಿ ಆಸ್ಪತ್ರೆಗೆ ಪುಂಡಲೀಕಪ್ಪ ಅವರ ಚಿಕಿತ್ಸೆಗೆಂದು ಈ ಕುಟುಂಬ ಕಾರಿನಲ್ಲಿ ಹೋಗುತ್ತಿದ್ದ ನಿನ್ನೆ ಮುಂಜಾನೆ 5.15ಕ್ಕೆ ಗಂಜಿಮಠ ಸೂರಲ್ಪಾಡಿ ಎ.ಕೆ.ಯು. ಶಾಲೆಯ ಬಳಿ ಮರಕ್ಕೆ ಢಿಕ್ಕಿ ಹೊಡೆದಿತ್ತು. ಅಶ್ವಿನಿ ಯವರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ,ಪುಂಡಲೀಕ ಅವರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!