Wednesday, April 24, 2024
spot_imgspot_img
spot_imgspot_img

ಬಂಟ್ವಾಳ: ತಾಲೂಕು ವಲಯ ಬಂಟರ ಸಂಘಗಳ ಸಹಯೋಗದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ;

- Advertisement -G L Acharya panikkar
- Advertisement -

ಸಮಗ್ರ ಪ್ರಶಸ್ತಿ ಪಡೆದುಕೊಂಡ ಕಲ್ಲಡ್ಕ ವಲಯ,

ರೋಮಾಂಚನಕಾರಿ ಹಗ್ಗಜಗ್ಗಾಟದ ದಾಖಲೆ ಮುರಿದ ವಿಟ್ಲ ವಲಯ

ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು ರಿ. ಬಂಟ್ವಾಳ ತಾಲೂಕಿನ ಎಲ್ಲಾ ವಲಯ ಬಂಟರ ಸಂಘಗಳ ಸಹಯೋಗದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ ಬಂಟವಾಳದ ಬಂಟರ ಭವನ ವಠಾರದಲ್ಲಿ ನಡೆಯಿತು. ಸಿದ್ಧಕಟ್ಟೆ, ಸಜಿಪ, ಮಾಣಿ, ಬಿ.ಸಿ ರೋಡ್, ಕಲ್ಲಡ್ಕ, ಮುಡಿಪು, ಸರಪಾಡಿ, ಫರಂಗಿಪೇಟೆ, ಅರಳ, ವಾಮದಪದವು, ಬೆಳ್ಳೂರು, ಸಾಲೆತ್ತೂರು, ವಿಟ್ಲ, ಕಾವಳಕಟ್ಟೆ, ಇರಾ ಹೀಗೆ ಒಟ್ಟು 15 ವಲಯದ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ರಮಾನಾಥ್ ರೈ, ರಾಕೇಶ್ ಮಲ್ಲಿ ಅಧ್ಯಕ್ಷರು ,ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್, ಕರ್ನಾಟಕ ರಾಜ್ಯ ಉತ್ತಮ ಪ್ರಾಂಶುಪಾಲ ಕೆ.ಎನ್ ಗಂಗಾಧರ ಆಳ್ವ, ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ, ಕಾರ್ಯದರ್ಶಿ ಜಗನ್ನಾಥ ಚೌಟ, ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರತಿಭಾ ಎ.ರೈ, ಮಹಿಳಾ ಸಂಘದ ಅಧ್ಯಕ್ಷೆ ರಮಾ ಎಸ್ ಭಂಡಾರಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಬಿ.ಸಿ ರೋಡ್ ವಲಯದ ಅಧ್ಯಕ್ಷ ದಿವಾಕರ ಶೆಟ್ಟಿ, ಪರಂಗಿಪೇಟೆ ವಲಯದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಬೆಳೈರು ವಲಯದ ಅಧ್ಯಕ್ಷ ಜನಾರ್ಧನ ಶೆಟ್ಟಿ, ಅರಳ ವಲಯದ ಅಧ್ಯಕ್ಷ ಸುಕುಮಾರ ಶೆಟ್ಟಿ, ಕಾವಳಕಟ್ಟೆ ವಲಯದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ವಿಟ್ಲ ವಲಯದ ಅಧ್ಯಕ್ಷ ರಾಧಕೃಷ್ಣ ಶೆಟ್ಟಿ ಚೆಲ್ಲಡ್ಕ, ಸಿದ್ಧಕಟ್ಟೆ ವಲಯದ ಅಧ್ಯಕ್ಷ ಸಂದೇಶ್ ಶೆಟ್ಟಿ, ಇರಾ ವಲಯದ ಅಧ್ಯಕ್ಷ ಚಂದ್ರಹಾಸ ರೈ ಬಾಲಾಜಿಬೈಲು, ಸರಪಾಡಿ ವಲಯದ ವಲಯಾಧ್ಯಕ್ಷ ದಯಾನಂದ ಶೆಟ್ಟಿ, ಸಾಲೆತ್ತೂರು ವಲಯದ ವಲಯಾಧ್ಯಕ್ಷ ದೇವಪ್ಪ ಶೇಖ, ಸಜಿಪ ವಲಯದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಮುಡಿಪು ವಲಯದ ಅಧ್ಯಕ್ಷ ಜಯಂತ ಶೆಟ್ಟಿ, ಮಾಣಿ ವಲಯದ ಅಧ್ಯಕ್ಷ ಗಂಗಾಧರ ರೈ, ಕಲ್ಲಡ್ಕ ವಲಯದ ಅಧ್ಯಕ್ಷ ಪದ್ಮನಾಭ ರೈ, ವಾಮದಪದವು ವಲಯ ಅಧ್ಯಕ್ಷ ವಸಂತ ಶೆಟ್ಟಿ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅತ್ಯುತ್ತಮ ಪ್ರಾಶುಂಪಾಲ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಉತ್ತಮ ಪ್ರಾಂಶುಪಾಲ ಕೆ.ಎನ್ ಗಂಗಾಧರ ಆಳ್ವ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ್ ರೈ ಸರಪ್ಪಾಡಿ, ರಾಕೇಶ್ ಮಲ್ಲಿ ಅಧ್ಯಕ್ಷರು ,ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್, ಹಾಗೂ ಬಂಟ್ವಾಳದ ವಲಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಕ್ರೀಡಾ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸುಮಾರು 15 ವಲಯಗಳ ಪೈಪೋಟಿಯ ನಡುವೆ ನಡೆದ ರೋಮಾಂಚನಕಾರಿ ಕ್ರೀಡಾಕೂಟದಲ್ಲಿ ವೈಯಕ್ತಿಕ ಕ್ರೀಡಾ ಸ್ಪರ್ಧೆ, ಸಾಮೂಹಿಕ ಕ್ರೀಡಾ ಸ್ಪರ್ಧೆಯನ್ನು ನಡೆಸಲಾಯಿತು.
ಪುರುಷರ ವಿಭಾಗ ಹಗ್ಗಜಗ್ಗಾಟ ಸ್ಪರ್ಧೆ: ಪ್ರಥಮ ವಿಟ್ಲ ವಲಯ, ದ್ವಿತೀಯ ಮಾಣಿ ವಲಯ, ಮಹಿಳೆಯರ ವಿಭಾಗ ಹಗ್ಗಜಗ್ಗಾಟ ಸ್ಪರ್ಧೆ ಪ್ರಥಮ; ಪರಂಗಿಪೇಟೆ ವಲಯ, ದ್ವಿತೀಯ ಮಾಣಿ ವಲಯ, ವಾಲಿಬಾಲ್ ಪುರುಷರ ವಿಭಾಗ ಪ್ರಥಮ: ಮುಡಿಪು ವಲಯ, ದ್ವಿತೀಯ ವಿಟ್ಲ ವಲಯ, ವಾಲಿಬಾಲ್ ಮಹಿಳೆಯರ ವಿಭಾಗ ಪ್ರಥಮ ಕಲ್ಲಡ್ಕ, ದ್ವಿತೀಯ ಬಿ ಸಿ ರೋಡ್, ತ್ರೋಬಾಲ್: ಪ್ರಥಮ ಸರಪಾಡಿ ವಲಯ, ದ್ವಿತೀಯ ಬಿ ಸಿ ರೋಡ್ ವಲಯ, ಕಬಡ್ಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ದಾಖಲೆ ಮೆರೆದ ವಿಟ್ಲ ವಲಯ ಈ ಬಾರಿಯೂ ಪ್ರಥಮ ಸ್ಥಾನದೊಂದಿಗೆ ದಾಖಲೆ ಮೆರೆದಿದೆ. ಕಲ್ಲಡ್ಕ ವಲಯವೂ ಪ್ರತೀ ವರ್ಷದಂತೆ ಈ ಬಾರಿ ದ್ವಿತೀಯ ಸ್ಥಾನ ಪಡೆದು ತನ್ನ ದಾಖಲೆಯ ಸ್ಥಾನವನ್ನು ಉಳಿಸಿಕೊಂಡಿದೆ.

ಅನೇಕ ವರ್ಷಗಳಿಂದ ರೋಮಾಂಚನಕಾರಿ ಪುರುಷರ ಹಗ್ಗಜಗ್ಗಾಟದ ವಿನ್ನರ್‍ಸ್ ಮಾಣಿ ವಲಯವನ್ನು ವಿಟ್ಲ ವಲಯ ರನ್ನರ್‍ಸ್ ಮಾಡಿದೆ. ಸಮಗ್ರ ಪ್ರಶಸ್ತಿಯನ್ನು ಕಲ್ಲಡ್ಕ ವಲಯ ಸತತ 2 ನೇ ಬಾರಿಗೆ ಪಡೆಯುತ್ತಿದೆ.


ವೈಯಕ್ತಿಕ, ಸಾಮೂಹಿಕ, ರೋಮಾಂಚನಕಾರಿ ಸ್ಪರ್ಧೆಗಳಲ್ಲಿ 15 ವಲಯಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಬಂಟ ಕ್ರೀಡಾಭಿಮಾನಿಗಳು ಭಾಗವಹಿಸಿದರು.

vtv vitla
- Advertisement -

Related news

error: Content is protected !!