Wednesday, May 8, 2024
spot_imgspot_img
spot_imgspot_img

ಮಂಗಳೂರು: ಮಲ್ಪೆ ಬಂದರಿನಲ್ಲಿ ಮೀನುಗಾರಿಕ ಬೋಟ್‌ ಮುಳುಗಡೆ; 10ಜನರ ರಕ್ಷಣೆ

- Advertisement -G L Acharya panikkar
- Advertisement -
vtv vitla

ಮಂಗಳೂರು : ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಯೊಂದು ಅಪಘಾತಕ್ಕೀಡಾಗಿ ಸಮುದ್ರದಲ್ಲೇ ಮುಳುಗಿದ ಘಟನೆ ವರದಿಯಾಗಿದೆ.

ಮಲ್ಪೆಯಿಂದ ಮೀನುಗಾರಿಗೆ ತೆರಳಿದ್ದ ದೋಣಿ ಪ್ರತಿಕೂಲ ಹವಮಾನದಿಂದ ಬೋಟು ತಳಭಾಗದಲ್ಲಿ ತೂತಾಗಿ ನೀರು ಒಳ ಬರಲಾರಂಭಿಸಿದೆ. ಕೂಡಲೇ ಸನಿಹದಲ್ಲಿದ್ದ ಬೋಟುಗಳಿಗೆ ರಕ್ಷಣೆಗಾಗಿ ಮೊರೆ ಹೋಗಿದ್ದಾರೆ,

ಮಂಗಳೂರಿನ ಮೋಹನ್ ಬೆಂಗ್ರೆ ಮಾಲಕತ್ವದ ಬೋಟು ರಕ್ಷಣೆಗೆ ಧಾವಿಸಿ ಬೋಟುನಲ್ಲಿದ್ದ 10 ಜನರನ್ನು ರಕ್ಷಣೆ ಮಾಡಿ ಮುಳುಗುತ್ತಿದ್ದ ದೋಣಿಯನ್ನು ಉಳಿಸುವ ಸಲುವಾಗಿ ತಮ್ಮ ದೋಣಿಗೆ ಕಟ್ಟಿ 30 ನಾಟಿಕಲ್ ಮೈಲ್ ದೂರ ಮಂಗಳೂರು ಬಂದರು ಕಡೆಗೆ ಎಳದುಕೊಂಡು ಬರುವ ಪ್ರಯತ್ನ ಮಾಡಿದರೂ ಯಶಸ್ಸು ಸಿಗದೇ 7 ನಾಟಿಕಲ್ ಮೈಲು ದೂರಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿದೆ, ಇದರಿಂದ ಲಕ್ಷಾಂತರ ಮೌಲ್ಯದ ಬಲೆ, ಬೋಟ್ ಸಮುದ್ರದಲ್ಲಿ ಮುಳುಗಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಮುಳುಗಿದ ಬೋಟಿನಲ್ಲಿದವರೆಲ್ಲಾ ಸೇಫ್‌ ಆಗಿದ್ದು ಮಂಗಳೂರಿಗೆ ಕರೆತರಲಾಗಿದೆ.

- Advertisement -

Related news

error: Content is protected !!