Monday, May 13, 2024
spot_imgspot_img
spot_imgspot_img

ಮಂಗಳೂರು: ಮಳಲಿ ಮಸೀದಿ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಿ; ಶರಣ್ ಪಂಪ್ ವೆಲ್ ಆಗ್ರಹ

- Advertisement -G L Acharya panikkar
- Advertisement -

ಮಂಗಳೂರು: ಮಳಲಿಯಲ್ಲಿನ ಮಸೀದಿ ಇರುವ ಪ್ರದೇಶವು ಹಿಂದೂಗಳದ್ದು ಎಂದು ತಾಂಬೂಲ ಪ್ರಶ್ನೆಯಲ್ಲಿ ಸಾಬೀತಾಗಿದೆ, ಆದ್ದರಿಂದ ಈ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಿ ಎಂದು ಮಸೀದಿಯ ಆಡಳಿತ ಕಮಿಟಿಗೆ ಒತ್ತಾಯ ಹಾಗೂ ಮನವಿಯನ್ನು ಮಾಡುತ್ತಿದ್ದೇನೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು ಮಳಲಿ ಮಸೀದಿ ಇದ್ದ ಪ್ರದೇಶ ಹಿಂದೂಗಳ ಸ್ಥಳ ಅದನ್ನು ಬಿಟ್ಟು ಕೊಡಬೇಕೆಂದು ಹೋರಾಟ ಮನವಿಯನ್ನು ಮಾಡಿದ್ದೇವು. ಆದ್ದರಿಂದ ಅಲ್ಲಿ ದೇವತಾ ಸಾನಿಧ್ಯವಿತ್ತೇ, ಯಾವ ದೇವರ ಆರಾಧನೆ ನಡೆಯುತ್ತಿತ್ತು ಎಂಬ ಉದ್ದೇಶದಿಂದ ಇಂದು ತಾಂಬೂಲ ಪ್ರಶ್ನೆ ಇಡಲಾಗಿತ್ತು. ಇದೀಗ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ಅವರು ಇಟ್ಟಿರುವ ತಾಂಬೂಲ ಪ್ರಶ್ನೆಯಲ್ಲಿ ದೇವತಾ ಸಾನಿಧ್ಯ ಇತ್ತು ಎಂಬ ಸ್ಪಷ್ಟತೆ ಗೋಚರವಾಗಿದೆ. ಮಸೀದಿ ಇದ್ದ ಪ್ರದೇಶದಲ್ಲಿ ಹಿಂದೆ ಶೈವ ಆರಾಧನೆ ನಡೆಯುತ್ತಿತ್ತು ಎಂಬ ಸತ್ಯಾಸತ್ಯತೆ ದೊರಕಿದೆ ಎಂದರು.

ಈ ಹಿನ್ನೆಲೆಯಲ್ಲಿ ಮಸೀದಿ ಇರುವ ಜಾಗವನ್ನು ಹಿಂದೂಗಳದ್ದು, ಹಿಂದೂಗಳಿಗೆ ಬಿಟ್ಟುಕೊಡಿ ಎಂದು ಮಸೀದಿಯ ಆಡಳಿತ ಕಮಿಟಿಗೆ ಒತ್ತಾಯ ಹಾಗೂ ಮನವಿಯನ್ನು ಮಾಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಗೂ ಸೂಕ್ತ ದಾಖಲೆಗಳನ್ನು ನಾವು ನೀಡುತ್ತೇವೆ. ಆ ಮೂಲಕ ತಮಗೆ ನ್ಯಾಯ ಸಿಗುವ ಭರವಸೆ ನೀಡುತ್ತೇವೆ ಎಂದು ಶರಣ್ ಪಂಪ್ ವೆಲ್ ಹೇಳಿದರು.

- Advertisement -

Related news

error: Content is protected !!