Sunday, June 14, 2026
spot_imgspot_img
spot_imgspot_img

ಕಾಸರಗೋಡು :ಬಸ್‌ಗೆ ಲಾರಿ ಡಿಕ್ಕಿ; ಚಾಲಕ ಸೇರಿ ನಾಲ್ವರಿಗೆ ಗಾಯ..!

- Advertisement -
- Advertisement -

ಕಾಸರಗೋಡು : ಖಾಸಗಿ ಬಸ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಚಾಲಕ ಸೇರಿ ನಾಲ್ವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಗೇಟ್ ಬಳಿ ನಡೆದಿದೆ.

ಗಾಯಗೊಂಡ ಬಸ್‌ ಚಾಲಕ ಅಶ್ರಫ್ ಎಂದು ಗುರುತಿಸಲಾಗಿದೆ.

ಪ್ರಯಾಣಿಕರನ್ನು ಇಳಿಸಲು ರಸ್ತೆ ಬದಿ ನಿಲ್ಲಿಸಿದ್ದ ಬಸ್ಸನ್ನು ಹಿಂದಿಕ್ಕುವ ರಭಸದಲ್ಲಿ ಕಂಟೈನ‌ರ್ ಲಾರಿಯೊಂದು ಮುಂದೆ ಬರುತ್ತಿದ್ದ ಇನ್ನೊಂದು ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಬಸ್‌ ಚಾಲಕ ಉಪ್ಪಳದ ಅಶ್ರಫ್ ಹಾಗೂ ನಾಲ್ವರು ಪ್ರಯಾಣಿಕರು ಗಾಯ ಗೊಂಡಿದ್ದಾರೆ. ಬಸ್ಸಿನ ಮುಂಭಾಗ ನಜ್ಜು ಗುಜ್ಜಾಗಿದ್ದು, ಸಿಲುಕಿದ್ದ ಚಾಲಕನನ್ನು ನಾಗರಿಕರು ಹರಸಾಹಸಪಟ್ಟು ಹೊರ ತೆಗೆದಿದ್ದಾರೆ. ಅಪಘಾತದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿತು. ಘಟನಾ ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಠಾಣಾ ಪೊಲೀಸರು ಸಂಚಾರ ಸುಗಮ ಗೊಳಿಸಿದರು. ಬಸ್ ತಲಪಾಡಿ ಯಿಂದ ಕಾಸರಗೋಡಿಗೆ ಹಾಗೂ ಲಾರಿ ಮಂಗಳೂರು ಕಡೆಗೆ ತೆರಳುತ್ತಿತ್ತು. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

Related news

error: Content is protected !!