Sunday, April 28, 2024
spot_imgspot_img
spot_imgspot_img

ಮಂಗಳೂರು: ಮಾರಕಾಸ್ತ್ರಗಳಿಂದ ಯುವಕನ ಮೇಲೆ ದಾಳಿ ಪ್ರಕರಣ: ನಾಲ್ವರ ಬಂಧನ.!

- Advertisement -G L Acharya panikkar
- Advertisement -

vtv vitla

ಮಂಗಳೂರು: ನವೆಂಬರ್ 28ರಂದು ನಗರದಲ್ಲಿ ರೌಡಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯುವಕನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬ0ಧಿತ ಆರೋಪಿಗಳನ್ನು ಮಂಗಳೂರು ಅಶೋಕನಗರ ನಿವಾಸಿ ನವನೀತ್, ಹೊಯಿಗೆಬೈಲ್ ನಿವಾಸಿ ಹೇಮಂತ್, ಬೋಳೂರು ನಿವಾಸಿ ದೀಕ್ಷಿತ್, ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿರುವ ಸಂದೇಶ್ ಎಂದು ಗುರುತಿಸಲಾಗಿದೆ. ಗ್ಯಾಂಗ್‌ವಾರ್‌ನಿ0ದ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಶ್ರವಣ್ ಎನ್ನಲಾಗಿದೆ.

2020ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬ0ಧಿಸಿದ0ತೆ ಇಬ್ಬರು ಕೊಲೆ ಆರೋಪಿಗಳು ಗಾಯಾಳು ಶ್ರವಣ್ ಸಹೋದರರಾಗಿದ್ದಾರೆ. ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆಯತ್ನ ನಡೆದಿದೆ ಎನ್ನಲಾಗಿದೆ. ನವೆಂಬರ್ 28 ರಂದು 8 ಮಂದಿಯ ತಂಡವು ಮಾರಕಾಸ್ತ್ರಗಳಿಂದ ಶ್ರವಣ್ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ದೇಹಕ್ಕೆ 17 ಕಡೆಗೆ ಸ್ಟಿಚ್ ಹಾಕಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಈ ಕೃತ್ಯಕ್ಕೆ ಬಳಸಿರುವ ಮೂರು ತಲವಾರು, ಮೂರು ದ್ವಿಚಕ್ರ ವಾಹನಗಳು, ಒಂದು ಆಟೊ ರಿಕ್ಷಾವನ್ನು ಸ್ವಾಧೀನಪಡಿಸಲಾಗಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!