Wednesday, May 15, 2024
spot_imgspot_img
spot_imgspot_img

ಮಂಗಳೂರು: ಮುಸ್ಲಿಂ ಮಹಿಳೆಯನ್ನು ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ನಡೆಸಿ ಕೈಕೊಟ್ಟ ಚರ್ಚ್‌ನ ಧರ್ಮಗುರು..? – ಮಹಿಳೆಯಿಂದ ಗಂಭೀರ ಆರೋಪ – ಎಫ್‌ಐಆರ್ ದಾಖಲು

- Advertisement -G L Acharya panikkar
- Advertisement -

ಮಂಗಳೂರು ನಗರದ ಸೈಂಟ್ ಪಾಲ್ ಚರ್ಚ್‌ನ ಧರ್ಮಗುರು ನೋಯಲ್ ಕರ್ಕಡ ವಿರುದ್ಧ ಮಹಿಳೆಯೊಬ್ಬರು ನಂಬಿಕೆ ದ್ರೋಹ, ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ಆನಂತರ ಅರ್ಧದಲ್ಲಿ ಕೈಬಿಟ್ಟು ವಂಚಿಸಿದ್ದಾನೆ ಎಂದು ಉಡುಪಿ ಮೂಲದ ಮುಸ್ಲಿಂ ಮಹಿಳೆಯೊಬ್ಬರು ಆರೋಪಿಸಿ ಮಂಗಳೂರಿನ ಬಲ್ಮಠದ ಶಾಂತಿ ಕೆಥಡ್ರಲ್ ಚರ್ಚ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

2021ರ ಆಗಸ್ಟ್‌ನಲ್ಲಿ ಧರ್ಮಗುರು ನೋಯಲ್ ಕರ್ಕಡ ಅವರ ಪರಿಚಯವಾಗಿದೆ. ಬಳಿಕ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾರೆ. ಕಳಸ, ಕಾಸರಗೋಡಿಗೆ ಸುತ್ತಾಡಿಸಿದ್ದಾರೆ. ಕೊಟ್ಟಾರದಲ್ಲಿರುವ ಕ್ವಾಟ್ರಸ್ ನಲ್ಲಿ ಇರಿಸಿಕೊಂಡು ದೈಹಿಕ ಸಂಪರ್ಕ ಮಾಡಿದ್ದ. 2022ರ ಫೆಬ್ರವರಿ ನಂತರ ದೂರ ಮಾಡಿದ್ದು, ಸಂಪರ್ಕ ಕಡಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಸೈಂಟ್ ಪಾಲ್ ಚರ್ಚ್ ನಲ್ಲಿ ಭೇಟಿಯಾಗಲು ಯತ್ನಿಸಿದಾಗ, ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ಕೊಟ್ಟರೆ ಸಾಯಿಸ್ತೀನಿ ಎಂದು ಬೆದರಿಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಬಿಷಪ್ ಹೌಸ್​ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರು ಮಂದಿಯ ವಿರುದ್ಧ ದಾಖಲಾಯ್ತು ಎಫ್‌ಐಆರ್‌

ನ್ಯಾಯ ಕೇಳಿದಾಗ ತನಗೆ ಜೀವ ಬೆದರಿಕೆ ಹಾಕಿದ್ದಲ್ಲದೆ ಹಲ್ಲೆಯನ್ನೂ ಮಾಡಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೆ ಕೊಲ್ಲುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ವಾಟ್ಸ್‌ಆ್ಯಪ್ ಚಾಟ್‌ಗಳಲ್ಲದೆ ನಾವು ಜೊತೆಗಿದ್ದ ವಿಡಿಯೋಗಳನ್ನು ದಾಖಲೆಯಾಗಿಟ್ಟುಕೊಂಡು ಒಡನಾಡಿ ಸಂಸ್ಥೆಯ ನೆರವು ಪಡೆದು ಪೊಲೀಸರಿಗೆ ದೂರು ನೀಡುವೆ ಎಂದಿದ್ದಾರೆ. ಇತ್ತೀಚೆಗೆ ಬಲ್ಮಠ ಸಿಎಸ್ಐ ಬಿಷಪ್ ಹೌಸ್ ಸೆಕ್ರಟರಿಯಾಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅತ್ಯಾಚಾರ ಸೇರಿ ಕಿರುಕುಳದ ಬಗ್ಗೆ ಎಫ್ಐಆರ್ ಆಗಿದೆ

- Advertisement -

Related news

error: Content is protected !!