Friday, March 29, 2024
spot_imgspot_img
spot_imgspot_img

ಕಡಬ: ಭಾರೀ ಗಾಳಿ ಮಳೆಗೆ ಜೀಪ್ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ!

- Advertisement -G L Acharya panikkar
- Advertisement -

ಕಡಬ: ಬೃಹತ್ ಗಾತ್ರದ ಮರವೊಂದು ಭಾರೀ ಗಾಳಿ ಮಳೆಗೆ ಜೀಪ್ ಮೇಲೆ ಉರುಳಿ ಬಿದ್ದು, ಜೀಪ್ ಸಂಪೂರ್ಣ ಜಖಂಗೊಂಡ ಘಟನೆ ಕಡಬ ತಾಲೂಕಿನ ಕೊಂಬಾರು ಎಂಬಲ್ಲಿ ನಡೆದಿದೆ.

ಈ ಟೂರಿಸ್ಟ್ ಜೀಪ್ ಕೊಂಬಾರು ನಿವಾಸಿ ಕಿರಣ್ ಅವರದ್ದಾಗಿದೆ. ಮನೆಯ ಸಮೀಪ ಪಾರ್ಕಿಂಗ್ ಮಾಡಿದ್ದ ಜೀಪ್ ಮೇಲೆ ಪಕ್ಕದ ಧರೆಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ಈ ವೇಳೆ ಜೀಪ್ ನಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ತಿಳಿದುಬಂದಿದೆ.

driving
- Advertisement -

Related news

error: Content is protected !!