Monday, June 8, 2026
spot_imgspot_img
spot_imgspot_img

ಮಂಗಳೂರು: ರಸ್ತೆ ಬದಿಯಲ್ಲಿ ಅಗೆದಿಟ್ಟ ಗುಂಡಿಗೆ ಬಿದ್ದ ಮಹಿಳೆ; ಸ್ಥಳೀಯರಿಂದ ಅಕ್ರೋಶ

- Advertisement -
- Advertisement -
vtv vitla

ಮಂಗಳೂರು: ನಗರದ ಜ್ಯೋತಿ ವೃತ್ತದ ಸೋಜಾ ಆರ್ಕೇಡ್ ಬಳಿ ರಸ್ತೆ ಬದಿಯಲ್ಲಿ ಅಗೆದಿಟ್ಟ ಗುಂಡಿಗೆ ಬಿದ್ದು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಜ್ಯೋತಿ ಕೆಎಂಸಿ ಆಸ್ಪತ್ರೆ ಕಡೆಯಿಂದ ಮಿಲಾಗ್ರಿಸ್ ಕಡೆಗೆ ನಡೆದು ಹೋಗುತ್ತಿದ್ದ ಸುಮಾರು 55 ವರ್ಷದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಅಗೆದಿಟ್ಟ ಗುಂಡಿಗೆ ಬಿದ್ದಿದ್ದಾರೆ. ಸುಮಾರು ಏಳು ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆಯನ್ನು ಬಳಿಕ ಸ್ಥಳೀಯರು ಕಷ್ಟಪಟ್ಟು ಹೊರಗೆ ತೆಗೆದಿದ್ದಾರೆ.

ಕೇಬಲ್ ಕಾಮಗಾರಿ ನೆಪದಲ್ಲಿ ಸೋಜಾ ಆರ್ಕೇಡ್ ಎದುರಲ್ಲಿ ಒಂದು ತಿಂಗಳಿನಿಂದ ರಸ್ತೆ ಬದಿ ಗುಂಡಿ ತೆಗೆಯಲಾಗಿದೆ, ಅದನ್ನು ಮುಚ್ಚದೆ ಹಾಗೇ ಬಿಡಲಾಗಿದ್ದು, ಪಾದಚಾರಿಗಳು ನಡೆದು ಹೋಗುವುದಕ್ಕೆ ಕಷ್ಟ ಪಡುತ್ತಿದ್ದಾರೆ, ಮಹಿಳೆ ಕವುಚಿಕೊಂಡು ಬಿದ್ದಿದ್ದು, ತಲೆಯ ಭಾಗ ಗುಂಡಿಯ ಒಳಗೆ ಬಿದ್ದಿತ್ತು, ಬೆನ್ನು ಮತ್ತು ಕುತ್ತಿಗೆಯ ಭಾಗಕ್ಕೆ ಗಾಯಗೊಂಡಿದ್ದು, ಜೊತೆಗಿದ್ದ ಗಂಡ ಬಳಿಕ ಅವರನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -

Related news

error: Content is protected !!