Saturday, April 27, 2024
spot_imgspot_img
spot_imgspot_img

ಮಂಗಳೂರು: ರೌಡಿಶೀಟರ್ ಗೌರೀಶ್ ಹತ್ಯೆಗೆ ಸಂಚು- ಆಕಾಶಭವನ ಶರಣ್ ನ ಸಹಚರರ ಬಂಧನ!

- Advertisement -G L Acharya panikkar
- Advertisement -

ಮಂಗಳೂರು: ರೌಡಿಶೀಟರ್ ಗೌರೀಶ್ ನ ಹತ್ಯೆಗೆ ಸಂಚು ನಡೆಸಿದ ಆಕಾಶಭವನ ಶರಣ್ ನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಆಕಾಶ ಭವನದ ಶರಣ್ ಜೈಲಿನಲ್ಲಿ ಇದ್ದುಕೊಂಡೆ ತನ್ನದೆ ಒಂದು ರೌಡಿ ತಂಡವನ್ನು ಇಟ್ಟಿಕೊಂಡಿದ್ದು, ಶ್ರೀಮಂತರನ್ನು ಬೆದರಿಸಿ ಹಫ್ತ ವಸೂಲಿ, ಹಣಕಾಸಿನ ಡೀಲ್ ಮಾದಕ ವಸ್ತುಗಳ ಸಾಗಾಟ ಮರಳು ದಂಧೆ, ಮತ್ತಿತರ ಅಕ್ರಮ ಚಟುವಟಿಕೆಗಳು ನಡೆಸಿ ಹಣ ಗಳಿಸುತ್ತಿದ್ದನು.

ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಕುಲಶೇಖರ ಕಟ್ಟೆಯ ಬಳಿ ಮಾ.17 ರಂದು ಬೆಳಗ್ಗಿನ ಜಾವ ಮನೀಶ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರನ್ನು ಅಪರಿಚಿತರು ತಡೆದು ನಿಲ್ಲಿಸಿ ಮಾರಾಕಸ್ತ್ರ ಚೂರಿ ತೋರಿಸಿ ಮೊಬೈಲ್ ಮತ್ತು ಸ್ಕೂಟರನ್ನು ದರೋಡೆ ಮಾಡಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶರಣ್ ನ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2, ಕಾವೂರಿನಲ್ಲಿ 4, ಬರ್ಕೆಯಲ್ಲಿ 3, ಉಳ್ಳಾಲದಲ್ಲಿ 1, ಕಂಕನಾಡಿ ನಗರದಲ್ಲಿ 2 ಪ್ರಕರಣ ಒಟ್ಟು 11 ಪ್ರಕರಣಗಳು ಇದ್ದು, ಈತ ಬರ್ಕೆ ಕಾವೂರು ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ರೌಡಿ ಶೀಟರ್ ಹಾಳೆ ಹೊಂದಿದ್ದಾನೆ.

ತನ್ನ ರೌಡಿ ಗ್ಯಾಂಗ್ ಗಳನ್ನು ಬಲಿಷ್ಟಗೊಳಿಸಿ ಮಂಗಳೂರಿನಲ್ಲಿ ತಾನೊಬ್ಬ ಡಾನ್ ಆಗಬೇಕೆಂದು ಎಲ್ಲಾ ರೌಡಿಗಳು ತನ್ನ ಕೆಳಗಡೆ ಇರಬೇಕು ಅಂತೆಯೇ ತನ್ನ ಗ್ಯಾಂಗ್ ಗೆ ಎದುರಾಳಿ ರೌಡಿಗಳಾದ ಪ್ರದೀಪ್ ಮೆಂಡನ್, ಹಾಗೂ ಮಂಕಿಸ್ಟಾಂಡ್ ವಿಜಯರನ್ನು ಕೂಡ ಕೊಲೆ ಮಾಡುವ ಉದ್ದೇಶ ಹೊಂದಿದ್ದು ತನಿಖೆಯಿಂದ ತಿಳಿದು ಬಂದಿದೆ.

ರೌಡಿ ಶೀಟರ್ ಗೌರೀಶ್ ಮೊದಲು ಆಕಾಶಭವನ ಶರಣ್ ನ ಗ್ಯಾಂಗ್ ನವನಾಗಿದ್ದು, ತದನಂತರದಲ್ಲಿ ಇವರೊಳಗೆ  ಹಣಕಾಸಿನ ವೈಮನಸ್ಸು ಬಂದು ಗೌರೀಶ್ ಈ ಗ್ಯಾಂಗ್ ನಿಂದ ಹೊರಬಂದು ತನ್ನದೆ ಹುಡುಗರೊಂದಿಗೆ ಗ್ಯಾಂಗ್ ಕಟ್ಟಿಕೊಟ್ಟಿಕೊಂಡಿದ್ದು, ಈ ದ್ವೇಷದಿಂದ ಆಕಾಶಭವನ ಶರಣ್ ತನ್ನ ಸಹಚರರರಾದ ದೀಕ್ಷಿತ್ (ದೀಕ್ಷು), ಚಂದ್ರ (ಚಂದ್ರಹಾಸ), ಹಾಗೂ ಇನ್ನಿತರರನ್ನು ಮುಗಿಸಲು ಸಂಚು ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

ಆಕಾಶ ಭವನ ಶರಣ್ ನ ತಮ್ಮ ಧೀರಜ್ (ಕುಟ್ಟ), ಆರೋಪಿತರಿಗೆ ಸಹಕಾರ ನೀಡೀರುವುದಲ್ಲದೆ ಅಕ್ರಮ ಮರಳು ದಂಧೆ ಡ್ರಗ್ಸ್ ಮತ್ತು ಶರಣ್ ಹೇಳಿದಂತೆ ಹಫ್ತಾ ವಸೂಲಿ ಡೀಲ್ ದಂಧೆಯಲ್ಲಿ ಭಾಗವಹಿಸಿರುವುದು ಕಂಡು ಬಂದಿರುವುದರಿಂದ ಆತನನ್ನು ಬಂಧಿಸಲಾಗಿದೆ. ಮತ್ತು ಆರೋಪಿತರಿಗೆ ಮಧ್ಯಪ್ರದೇಶದಿಂದ ಮಾರಕಾಸ್ತ್ರ ಪೂರೈಕೆ ಮಾಡಿದ ರಾಜೇಶ್ ತೋಮರ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದ್ದು, ಈತ ಈಗಾಗಲೇ ದಾಸ್ತಗಿರಿಯಾದ ಚಂದ್ರ (ಚಂದ್ರಹಾಸ) ಸೋಮೇಶ್ವರನ ಸಹಚರನಾಗಿದ್ದು, ಇತ್ತೀಚೆಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿರುವುದಲ್ಲದೆ, 2016 ರಲ್ಲಿ ಕಟೀಲ್ ನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಹಾಗೂ ಉಳ್ಳಾಲ ದಲ್ಲಿ ಚಂದ್ರಹಾಸನಿಗೆ ಪಿಸ್ತೂಲ್ ನೀಡಿದ ಪ್ರಕರಣದಲ್ಲಿ ಕೂಡಾ ಆರೋಪಿತನಾಗಿದ್ದು ಈವರೆಗೆ ತಲೆಮರೆಸಿಕೊಡಿದ್ದನು.

ರೌಡಿ ಆಕಾಶಭವನ ಶರಣ್ ನ ನಿಕಟ ಸಂಪರ್ಕ ಹೊಂದಿ ಆತನು ತಿಳಿಸಿದಂತೆ ಹಫ್ತಾ ವಸೂಲಿ ಡೀಲ್ ದಂಧೆ ಮರಳು ದಂಧೆ ಹಾಗೂ ಹೊರಗಡೆ ಹಣಕಾಸಿನ ಹೊಂದಾಣಿಕೆಯನ್ನು ಮಾಡುತ್ತಿದ್ದ ಈಗಾಗಲೇ ಶರಣ್ ಪ್ರಕರಣದಲ್ಲಿ ಆರೋಪಿತರಾಗಿರುವ ರಾಕೇಶ್ ಕಂಬಳಿ, ರಾಜೇಶ್ ಆಚಾರ್ಯ, ಸಾಗರ್ ಎಂಬವರನ್ನು ದಸ್ತಗಿರಿ ಮಾಡಲಾಗಿದೆ.

ಇವರಲ್ಲಿ ರಾಕೇಶ್ ಕಂಬಳಿ ಎಂಬಾತನ ಮೇಲೆ ಮಣಿಪಾಲ ಠಾಣೆಯಲ್ಲಿ ಅತ್ಯಾಚಾರ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಹಾಗೂ ರಾಜೇಶ್ ಆಚಾರ್ಯ ಎಂಬಾತನ ಮೇಲೆ ಬಜಪೆ ಠಾಣೆಯಲ್ಲಿ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣ ಸೇರಿದಂತೆ ಮೂರು ಪ್ರಕರಣಗಳು ದಾಖಲಾಗಿದೆ.

driving
- Advertisement -

Related news

error: Content is protected !!