Sunday, April 28, 2024
spot_imgspot_img
spot_imgspot_img

ಮಂಗಳೂರು ವಿ.ವಿ : ಆನ್ ಲೈನ್ ನ ಮೂಲಕ ಪರೀಕ್ಷೆ ನಡೆಸಲು ಚಿಂತನೆ

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ಆರನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಮಂಗಳೂರು ವಿ.ವಿ ಚಿಂತನೆ ಮಾಡುತ್ತಿದೆ.ಸೆಪ್ಟೆಂಬರ್ ಕೊನೆಯೊಳಗೆ ಪರೀಕ್ಷೆ ನಡೆಸಿ ಶೀಘ್ರವೇ ಫಲಿತಾಂಶವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಆತಂಕವನ್ನು ದೂರ ಪಡಿಸುವುದು ಇದರ ಮುಖ್ಯ ಉದ್ದೇಶ.

ವಿಶೇಷ ಸಾಫ್ಟ್ ವೇರ್ ಬಳಸಿ ಮಾಡಿಕೊಂಡು ಪುಣೆ ವಿ.ವಿ ಇಂತಹ ಪರೀಕ್ಷೆಗಳನ್ನು ನಡೆಸಿ ಯಶಸ್ವಿಯಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ನಕಲು ಮಾಡಲು ಸಾಧ್ಯವಿಲ್ಲ. ಪದವಿ ತರಗತಿಗಳ 1,3, 5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಕೊನೆಯ ಹಂತದಲ್ಲಿದೆ. ಮೌಲ್ಯಮಾಪನ ಕೂಡ ಅಂತಿಮ ಹಂತದಲ್ಲಿದೆ. ಇದಾದ ಬಳಿಕ ಕೂಡಲೇ ಎರಡನೇ ನಾಲ್ಕನೇ ಸೆಮಿಸ್ಟರ್ ಫಾರ್ಮುಲಾ ಆಧಾರಿತ ಪ್ರಮೋಷನ್ ಮಾಡಲಾಗುತ್ತದೆ.

ಕೊವೀಡ್ ಹಿನ್ನೆಲೆಯಲ್ಲಿ ತರಗತಿಗಳು ಕೂಡ ಆನ್ ಲೈನ್ ನಡೆದಿರುವ ಕಾರಣ ಪರೀಕ್ಷೆಗಳನ್ನು ಆನ್ ಲೈನ್ ನಲ್ಲಿ ನಡೆಸುವುದು ಸುಲಭ ಈ ಬಗ್ಗೆ ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ತಿಳಿಸಿದ್ದಾರೆ.

driving
- Advertisement -

Related news

error: Content is protected !!