Sunday, June 7, 2026
spot_imgspot_img
spot_imgspot_img

ಮಂಗಳೂರು: ಶೌಚಾಲಯಕ್ಕೆ ಗುಂಡಿ ಅಗೆಯುತ್ತಿರುವಾಗ ಮಣ್ಣು ಕುಸಿತ; ಓರ್ವ ಕಾರ್ಮಿಕ ಸಾವು, ಮತ್ತಿಬ್ಬರು ಗಂಭೀರ

- Advertisement -
- Advertisement -

ಮಂಗಳೂರು: ಹೊಸ ಮನೆಯ ನಿರ್ಮಾಣದ ಶೌಚಾಲಯಕ್ಕೆ ಗುಂಡಿ ಅಗೆಯುತ್ತಿರುವಾಗ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರು ಹೊರವಲಯದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಅಳಿಕೆ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.

ಘಟನೆಯಲ್ಲಿ ಅಡ್ಡೂರು ನಿವಾಸಿ ಆದಂ (63) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದು , ಇಮ್ತಿಯಾಝ್ ಮತ್ತು ಇಬ್ರಾಹಿಂ ಎಂಬವರು ಗಾಯಗೊಂಡವರಾಗಿದ್ದಾರೆ. ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ .ಮಂಗಳವಾರ ಸಂಜೆ 3.30ರಿಂದ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಇನ್ನು ಒಟ್ಟು ಮೂರು ಜನ ಶೌಚಾಲಯದ ಗುಂಡಿ ತೋಡುವ ಕೆಲಸ ಮಾಡುತ್ತಿದ್ದರು. ಸುಮಾರು ಏಳೆಂಟು ಅಡಿ ಗುಂಡಿ ತೋಡಲಾಗಿದ್ದು , ಈ ವೇಳೆ ಮೇಲ್ಭಾಗದಲ್ಲಿ ಮಣ್ಣು ಸಡಿಲಗೊಂಡು ಹಠಾತ್ ಜರಿದು ಬಿದ್ದಿದೆ. ಪರಿಣಾಮ ಆದಂ ಅವರು ಮಣ್ಣಿನಡಿಯಲ್ಲಿ ಸಿಲುಕಿಕೊಂಡು ಮೃತರಾಗಿದ್ದಾರೆ. ಬಜಪೆ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!