Friday, July 11, 2025
spot_imgspot_img
spot_imgspot_img

ಮಂಗಳೂರು: ಸಾಮರಸ್ಯದ ಜೀವನ ಮಾಡಬೇಕೆಂದರೆ ಈ ದೇಶದಲ್ಲಿ ಬದುಕಿ. ಆಗುದಿಲ್ಲ ಎಂದಾದರೆ ಎಲ್ಲಿ ಬೇಕಾದರೂ ಹೋಗಿ: ಕಲ್ಲಡ್ಕ ಪ್ರಭಾಕರ್ ಭಟ್

- Advertisement -
- Advertisement -

ಮಂಗಳೂರು: ಸಾಮರಸ್ಯದ ಜೀವನ ಮಾಡಬೇಕೆಂದರೆ ಈ ದೇಶದಲ್ಲಿ ಬದುಕಿ. ಆಗುದಿಲ್ಲ ಎಂದಾದರೆ ಎಲ್ಲಿ ಬೇಕಾದರೂ ಹೋಗಿ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮ ನಡೆದಿತ್ತು. ಆದರೆ, ಕಾರ್ಯಕ್ರಮದ ಉದ್ಘಾಟನೆಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಪ್ರತಿಭಟನೆ ನಡೆಸಿತು.

“ಯುನಿವರ್ಸಿಟಿ ಮಾರ್ಚ್” ಹೆಸರಿನಲ್ಲಿ ಪ್ರತಿಭಟನೆ ನಡೆಸಿದ ಸಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ವಿಶ್ವವಿದ್ಯಾನಿಲಯದ ಪ್ರವೇಶ ದ್ವಾರದಲ್ಲಿಯೇ ತಡೆದರು. ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ನೂಕಾಟ-ತಳ್ಳಾಟ ನಡೆಯಿತು. ಕಲ್ಲಡ್ಕ ಪ್ರಭಾಕರ್ ಭಟ್ ಕ್ರಿಮಿನಲ್ ಬ್ಯಾಕ್‌ಗ್ರಾಂಡ್ ಹೊಂದಿದ್ದಾರೆ ಎಂದು ಸಿಎಫ್‌ಐ ಕಾರ್ಯಕರ್ತರು ಆರೋಪಿಸಿ ಗೋ ಬ್ಯಾಕ್ ಘೋಷಣೆ ಕೂಗಿದರು. ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಕೇಸ್ ಯಾರಿಗೆ ಯಾರು ಬೇಕಾದರೂ ಹಾಕಬಹುದು. ಮೋದಿ, ಅಮಿತ್ ಶಾ ಮೇಲೂ ಕೇಸ್ ಇದೆ. ಅದಕ್ಕಾಗಿ ಅವರನ್ನು ಅಪರಾಧಿ ಎಂದು ಕರೆಯುವುದಕ್ಕೆ ಆಗುತ್ತಾ..? ನನಗೆ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಇಲ್ಲ ಎಂದು ಸ್ಪಷ್ಟಪಡಿಸಿ ತಿರುಗೇಟು ನೀಡಿದರು.

vtv vitla
- Advertisement -

Related news

error: Content is protected !!