Friday, March 29, 2024
spot_imgspot_img
spot_imgspot_img

ಮಂಗಳೂರು: ಸೆಕ್ಸ್‌ಗೆ ಆಹ್ವಾನಿಸಿದ ಹಿರಿಯ ಪೊಲೀಸ್‌ ಅಧಿಕಾರಿ; ಗಂಭೀರ ಆರೋಪ ಮಾಡಿದ ತೃತೀಯ ಲಿಂಗಿ- ತನಿಖೆ ಆರಂಭಿಸಿದ ಪೊಲೀಸ್‌ ಇಲಾಖೆ..!!

- Advertisement -G L Acharya panikkar
- Advertisement -
vtv vitla

ಮಂಗಳೂರು: “ನಮಗೆ ರಕ್ಷಣೆ ನೀಡಬೇಕಾದ ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ತನ್ನನ್ನು ಸೆಕ್ಸ್‌ಗೆ ಆಹ್ವಾನಿಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೇ ಹೀಗೆ ಮಾಡಿದರೆ ನಾವು ಯಾರಿಗೆ ದೂರು ನೀಡುವುದು?” ಎಂದು ತೃತೀಯ ಲಿಂಗಿಯೊಬ್ಬರು ಮಂಗಳೂರು ಪೊಲೀಸ್ ಅಧಿಕಾರಿಯೊಬ್ಬರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ನಗರದ ಜಿ.ಪಂ. ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ, ಅರಿವು ಕಾರ್ಯಾಗಾರ ನಡೆದಿತ್ತು. ಈ ವೇಳೆ ಹನಿ ಎಂಬ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ ತಮಗೆ ಯಾವುದರೂ ಪೊಲೀಸ್‌ ಠಾಣೆ, ಕಚೇರಿ ಎಲ್ಲಿಯಾದರೂ ಕಸ ಗುಡಿಸುವ ಕೆಲಸವನ್ನಾದರೂ ಕೊಡಿಸಿ ಈ ಹಾಳು ದಂಧೆಯನ್ನು ನಡೆಸೋಕೆ ನಮಗೂ ಮನಸ್ಸಿಲ್ಲ. ನೆಮ್ಮದಿಯಿಂದ ನಮ್ಮ ಪಾಡಿಗೆ ಇರುತ್ತೇವೆ. ಲಿಂಗತ್ವಅಲ್ಪಸಂಖ್ಯಾತರಿಗೆ ಉದ್ಯೋಗದಲ್ಲಿ ಮೀಸಲಾತಿ ಇಟ್ಟಿದ್ದೀರಿ. ಆದರೆ ನಮ್ಮವರಿಗೆ ಇಲ್ಲಿಯ ತನಕ ಎಷ್ಟು ಮಂದಿಗೆ ಉದ್ಯೋಗ ಕೊಡ್ತಿದ್ದೀರಿ ಎಂದು ನ್ಯಾಯಾಧೀಶರ ಬಳಿ ಪ್ರಶ್ನೆ ಮಾಡಿದರು.

ಪ್ರವೀಣ್ ಹೆಸರಿನ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ ತನಗೆ ನಗರದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ತನ್ನನ್ನು ಸೆಕ್ಸ್‌ಗೆ ಆಹ್ವಾನಿಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೇ ಹೀಗೆ ಮಾಡಿದರೆ ನಾವು ಯಾರಿಗೆ ದೂರು ನೀಡುವುದು?’ ಎಂದು ತಮ್ಮ ಅಳಲು ತೋಡಿಕೊಂಡರು.

ಇದಕ್ಕೆ ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ.ಕ ಜಿಲ್ಲೆಯ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜೆ. ಇದಕ್ಕೆ ಪ್ರತಿಕ್ರಿಯೆ ನೀಡಿ, ಶೋಷಣೆಗೆ ಒಳಗಾಗುವ ಲಿಂಗತ್ವ ಅಲ್ಪ ಸಂಖ್ಯಾತರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರು ಕೊಡಬೇಕು. ಉಚಿತವಾಗಿ ನ್ಯಾಯ ಪಡೆಯಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ದೂರು ನೀಡಬಹುದು. ಪ್ರಾಧಿಕಾರದ ಸೇವೆಯು ಉಚಿತವಾಗಿರುತ್ತದೆ. ದೂರುಗಳು ಬಂದಾಗ ನಾವು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನಗಳನ್ನು ಕೂಡ ಪಡೆಯಲು ಅವಕಾಶವಿರುತ್ತದೆ ಎಂದು ನ್ಯಾಯಾಧೀಶೆ ಧೈರ್ಯ ತುಂಬಿದರು.

ಇದು ಮಾಧ್ಯಮಗಳಲ್ಲಿ ಪ್ರಕಟವಾಗಿ ಚರ್ಚೆಯಾಗುತ್ತಲೇ ಎಚ್ಚೆತ್ತ ಪೊಲೀಸ್ ಇಲಾಖೆ ಆರೋಪ ಮಾಡಿದ ವ್ಯಕ್ತಿಯನ್ನು ಕರೆಸಿ ವಿಚಾರಣೆ ನಡೆಸಿ, ಅಧಿಕಾರಿ ಹೆಸರು, ಕರೆ ಮಾಡಿದ ದಿನ ಮತ್ತು ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪೊಲೀಸ್ ಕಮಿಷನರ್ ಕಚೇರಿಗೆ ಕರೆಸಿ ರವೀಶ್ ನಾಯಕ್ ನೇತೃತ್ವದ ತಂಡ ಪಡೆದುಕೊಂಡಿದೆ.

- Advertisement -

Related news

error: Content is protected !!