- Advertisement -
- Advertisement -


ಮಂಗಳೂರು: ಬೈಕಂಪಾಡಿಯ ಮೀನಕಳಿಯಲ್ಲಿ ರೌಡಿಶೀಟರ್ ಟ್ಯಾಟೂ ರಾಜಾ ಅಲಿಯಾಸ್ ರಾಘವೇಂದ್ರ ಕೊಲೆ ಪ್ರಕರಣದ ಪ್ರಮುಖ ಆರೋಪಿ ನವೀನ್ ಯಾನೆ ಮೈಕಲ್ ನವೀನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈಗ ಬಂಧಿಸಿದ ಆರೋಪಿಗಳ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.
ಮೈಕಲ್ ನವೀನ್ ಎಂಬಾತನ ಮೇಲೆ ಈಗಾಗಲೇ ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 8 ಕ್ರಿಮಿನಲ್ ಕೇಸುಗಳಿವೆ. ಟ್ಯಾಟೂ ರಾಜಾನ ಕೊಲೆಗೆ ಪ್ರಮುಖ ಸಂಚು ರೂಪಿಸಿ ಮಾರಕಾಯುಧಗಳೊಂದಿಗೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ.
ಇದಕ್ಕೂ ಮುಂಚೆ ಎರಡು ಆರೋಪಿಗಳನ ಮೂಲಕ ಮೂಲ್ಕಿ ಎಂಬಲ್ಲಿ ಇತರರನ್ನು ಬಂಧಿಸಲು ಹೋದಾಗ ಆರೋಪಿಗಳನ್ನು ಪೊಲೀಸರ ಮೇಲೆ ಹಲ್ಲೆಗೈದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದರು.
- ವೆನ್ಲಾಕ್ ಆಸ್ಪತ್ರೆಯ ಹೊರವಲಯದಲ್ಲಿ ಜಮೀನು ಕಾಯ್ದಿರಿಸಲು ಸಚಿವ ದಿನೇಶ್ ಗುಂಡೂರಾವ್ ಸೂಚನೆ
- ಅಶ್ರಫ್ ಗುಂಪು ಹತ್ಯೆ ಪ್ರಕರಣ: ಮೂವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ
- ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 10 ಮಂದಿ ಸಾವು, ಹಲವರಿಗೆ ಗಾಯ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಶ್ಲೇಷ ಮಂದಿರ ತುಳಸಿ ತೋಟಕ್ಕೆ ಸ್ಥಳಾಂತರ ದೇವಳದ ವ್ಯಾಪ್ತಿಯಿಂದ ದೂರವಿರುವುದಕ್ಕೆ ಸಾರ್ವಜನಿಕರಿಂದ ಅಸಮಾಧಾನ
- ಕರ್ಣಾಟಕ ಬ್ಯಾಂಕ್ ಬಗ್ಗೆ ಮಾಧ್ಯಮಗಳಲ್ಲಿ ಹಬ್ಬುತ್ತಿರುವ ಸುಳ್ಳು ಸುದ್ದಿಗಳಿಗೆ ಸ್ಪಷ್ಟನೆ


- Advertisement -