Monday, June 8, 2026
spot_imgspot_img
spot_imgspot_img

ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ವಿದೇಶಿ ಮಹಿಳೆ ದಿಢೀರ್​ ನಾಪತ್ತೆ

- Advertisement -
- Advertisement -

ಕಾರವಾರ: ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾಗಿರೋ ಘಟನೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ. ಎಮಿ ಯಮಾಝಕಿ (40) ನಾಪತ್ತೆಯಾದ ಜಪಾನ್ ಮೂಲದ ಪ್ರವಾಸಿ.

ನಾಪತ್ತೆಯಾದ ಮಹಿಳೆ ಫೆಬ್ರವರಿ 5ರಂದು ಗೋಕರ್ಣ ಬಂಗ್ಲೆಗುಡ್ಡೆ ನೇಚರ್ ಕಾಟೇಜ್‌ನಲ್ಲಿ ಪತಿ ಜೊತೆ ತಂಗಿದ್ದಳು. ಬೆಳಿಗ್ಗೆ 10:30ರ ವೇಳೆ ಕಾಟೇಜ್‌ನಿಂದ ಹೊರ ಹೋಗಿದ್ದಳು. ಆದರೆ ಆ ಮಹಿಳೆ ಮರಳಿ ಕಾಟೇಜ್​ಗೆ ಬಂದಿಲ್ಲ. ಕಾಣೆಯಾದ ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೋಲಿಸ್ ಠಾಣೆಗೆ ದೌಡಾಯಿಸಿ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಗೋಕರ್ಣ ಪೊಲೀಸರು ನಾಪತ್ತೆಯಾದ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Related news

error: Content is protected !!