Friday, April 26, 2024
spot_imgspot_img
spot_imgspot_img

ಮಂಗಳೂರು: “ಹಿಜಾಬ್ ವಿದ್ಯಾರ್ಥಿನಿಯರು ವಿದೇಶಗಳಿಗೆ ಹೋಗಲಿ ನಮ್ಮ‌ ದೇಶದ ಮಹತ್ವ ಗೊತ್ತಾಗುತ್ತದೆ” ; ಶಾಸಕ ಯು.ಟಿ ಖಾದರ್ ತಿರುಗೇಟು

- Advertisement -G L Acharya panikkar
- Advertisement -

ಮಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭಾ ವಿಪಕ್ಷ ಉಪನಾಯಕ ಯು. ಟಿ. ಖಾದರ್ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿದ್ಯಾರ್ಥಿನಿಯರ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ.

‘ಹಿಜಾಬ್ ವಿದ್ಯಾರ್ಥಿನಿಯರು ಒಮ್ಮೆ ಪಾಕಿಸ್ತಾನ, ಸೌದಿಯಂತಹ ದೇಶಗಳಿಗೆ ಹೋಗಲಿ. ಆಗ ನಮ್ಮ‌ ದೇಶದ ಮಹತ್ವ ಗೊತ್ತಾಗುತ್ತದೆ. ಇಲ್ಲಿ ಬೇಕಾದ ಹಾಗೆ ಮಾತನಾಡೋದು, ಡಿಸಿಯನ್ನು ಭೇಟಿಯಾಗೋದು, ಪ್ರೆಸ್ ಮೀಟ್ ಎಲ್ಲಾ ಮಾಡಬಹುದು. ಆದರೆ ಅದನ್ನೇ ವಿದೇಶಕ್ಕೆ ಹೋಗಿ ಮಾಡಲಿ. ಇಲ್ಲಿ‌ ಹುಲಿಯ ಹಾಗೆ ಇದ್ದವರು ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ. ಆಗ ನಮ್ಮ ದೇಶದ ಕಾನೂನು ನೀಡಿದ ಅವಕಾಶದ ಮಹತ್ವ ಗೊತ್ತಾಗುತ್ತದೆ. ಇಲ್ಲಿ ಸಿಗುವ ಸ್ವಾತಂತ್ರ್ಯದ ಅರಿವು ಆಗುತ್ತದೆ’ ಎಂದು ಹಿಜಾಬ್ ವಿದ್ಯಾರ್ಥಿನಿಯರಿಗೆ ಯು. ಟಿ. ಖಾದರ್ ಬುದ್ದಿಮಾತು ಹೇಳಿದ್ದಾರೆ.

ವಾರದ ಹಿಂದೆಯಷ್ಟೇ ನಾವು ನಮ್ಮ ಸಮಸ್ಯೆ ಹೇಳಲು ಹೋಗಿದ್ದಾಗ ಶಾಸಕ ಯು. ಟಿ. ಖಾದರ್ ಕ್ರಿಕೆಟ್ ಆಟದಲ್ಲಿ ಬ್ಯುಸಿ ಇದ್ದರು ಎಂಬ ಹಿಜಾಬ್ ವಿದ್ಯಾರ್ಥಿನಿಯರು ಆರೋಪ ಮಾಡಿದ್ದರು. ಇದನ್ನು ಅಲ್ಲಗಳೆದಿದ್ದ ಖಾದರ್, ‘ವಿದ್ಯಾರ್ಥಿನಿಯರು ದುರುದ್ದೇಶ ಪೂರಿತವಾಗಿ ಹೇಳಿಕೆ ಕೊಟ್ಟಿದ್ದಾರಾ?, ರಾಜಕೀಯ ಪ್ರೇರಿತವಾಗಿ ಹೇಳಿಕೆ ಕೊಟ್ಟಿದ್ದಾರಾ? ಏನು ಅಂತಾ ವಿಚಾರ ಗೊತ್ತಿಲ್ಲ. ಅವರ ಹೇಳಿಕೆಯ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ನನಗೆ ಕಾಲ್ ಬಂದಾಗ ನನ್ನಿಂದಾದ ನೆರವು ನೀಡಿದ್ದೇನೆ, ಜಿಲ್ಲಾಧಿಕಾರಿ ಜೊತೆ ಮಾತುಕತೆಗೆ ಸಹಾಯ ಮಾಡಿದ್ದೇನೆ’ ಎಂದಿದ್ದರು.

ಹಿಜಾಬ್ ವಿದ್ಯಾರ್ಥಿನಿಯರು ತಮ್ಮ ಹೋರಾಟಕ್ಕೆ ಮುಸ್ಲಿಂ ಧರ್ಮದ ಮುಖಂಡರ ಸಹಾಯ ಕೇಳಿದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯು. ಟಿ. ಖಾದರ್, ‘ದೇಶದ ಕಾನೂನಿನ ಪ್ರಕಾರವಾಗಿ ನಾನು ಅವರಿಗೆ ಸಹಾಯ ಮಾಡಿದ್ದೇನೆ. ಶಿಕ್ಷಣ ಎಲ್ಲರಿಗೂ ಪ್ರಮುಖವಾಗಿದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯ ಬಹಳಷ್ಟಿದೆ. ವಿದ್ಯಾರ್ಥಿನಿಯರಿಗೆ ಕಾನೂನು ವ್ಯಾಪ್ತಿಯಲ್ಲಿ ಯಾವೆಲ್ಲಾ ಸಹಕಾರ ಮಾಡಬಹುದು, ಅದನ್ನು ನಾನು ಮಾಡಿದ್ದೇನೆ. ಆ ಬಳಿಕ ವಿದ್ಯಾರ್ಥಿನಿಯರು ನನ್ನ ಕರೆಯನ್ನು ಸ್ವೀಕಾರ ಮಾಡಲಿಲ್ಲ ಕರೆ ಮಾಡಿದ ತಕ್ಷಣ ಕರೆಯನ್ನು ಕಟ್ ಮಾಡಿದರು. ಕಚೇರಿಯಿಂದ ಕರೆ ಮಾಡಿಸಿದರೆ ಯಾವುದೇ ಸ್ಪಂದನೆ ನೀಡಲಿಲ್ಲ. ಹಾಗಾಗಿ ಅವರ ಸಮಸ್ಯೆ ಬಗೆಹರಿದಿರಬಹುದು ಎಂದು ಭಾವಿಸಿದೆ’ ಎಂದು ಯು. ಟಿ. ಖಾದರ್ ಹೇಳಿದ್ದಾರೆ.

- Advertisement -

Related news

error: Content is protected !!