Friday, April 26, 2024
spot_imgspot_img
spot_imgspot_img

ಮಂಗಳೂರು: ಹೋಟೆಲ್ ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ- ಪ್ರಧಾನ ಆರೋಪಿಗಳ ಬಂಧನ!

- Advertisement -G L Acharya panikkar
- Advertisement -

ಮಂಗಳೂರು: ಕಳೆದ ವರ್ಷ ಅಕ್ಟೋಬರ್ 30 ರಂದು ಫಳ್ನೀರ್ ನಲ್ಲಿರುವ ಹೋಟೆಲೊಂದರಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಧಾನ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಳ್ಳಾಲ ಮುಕ್ಕಚೇರಿ ನಿವಾಸಿ ಮಹಮ್ಮದ್ ಸಮೀರ್ ಯಾನೆ ಸಮೀರ್ ಕಡಪರ ಯಾನೆ ರೋಬರ್ಟ್ (29) ಹಾಗೂ ಮೇಲಂಗಡಿ ನಿವಾಸಿ ಮೊಹಮ್ಮದ್ ಅರ್ಫಾನ್ (23) ಎಂದು ಗುರುತಿಸಲಾಗಿದ್ದು, ಪೊಲೀಸರು ಆರೋಪಿಗಳಿಂದ ಚಾಕು ಮತ್ತು ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ.

ಅಕ್ಟೋಬರ್ 30 ರಂದು ಫಳ್ನೀರ್‌ನಲ್ಲಿರುವ ಹೋಟೆಲ್‌ಗೆ ಆರೋಪಿಗಳಾದ ಸಮೀರ್, ಅರ್ಫಾನ್, ಇಜಾಜ್ ಮೊಹಮ್ಮದ್, ಜುನೈದ್ ಬಶೀರ್ ಹಾಗೂ ಅಬೂಬ್ಬಕರ್ ಸಿದ್ದಿಕಿ,ಜಾಜ್ ಮೊಹಮ್ಮದ್, ಜುನೈದ್ ಬಶೀರ್ ಮತ್ತು ಹಣದ ನೆರವು ನೀಡಿ ಆಶ್ರಯ ನೀಡಿದ್ದ ಹನೀಫ್, ಮೊಹಮ್ಮದ್ ಸತ್ತಾರ್, ಅಶ್ರಫ್, ಮೊಹಮ್ಮದ್ ಸಾದಿಕ್, ಶಾರೂಕ್, ಸಿದ್ದಿಕ್ ಮತ್ತು ಮೊಹಮ್ಮದ್ ಅಸ್ಕರ್ ಉಪಹಾರ ಸೇವಿಸಲು ಹೋಗಿದ್ದರು.

ಈ ವೇಳೆ ಸಮೋಸಾ ಬಿಸಿಯಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಸೊತ್ತುಗಳನ್ನು ಹಾನಿ ಮಾಡಿ, ಸಿಬ್ಬಂದಿಗಳಿಗೆ ಚೂರಿಯಿಂದ ತಿವಿದು ಕೊಲೆ ಮಾಡಲು ಯತ್ನಿಸಿ ಓಡಿ ಹೋದಾಗ, ಹೋಟೆಲ್ ಸಿಬ್ಬಂದಿಗಳು ಆರೋಪಿಗಳನ್ನು ಬೆನ್ನಟ್ಟಿದ್ದರು. ಈ ವೇಳೆ ಕಡಪರ ಸಮೀರ್ ಎಂಬಾತ ಹೋಟೆಲ್ ಸಿಬ್ಬಂದಿಯ ಮೇಲೆ ರಿವಾಲ್ವರ್ ನಿಂದ ಶೂಟ್ ಮಾಡಿ ಕೊಲೆಯತ್ನ ಮಾಡಿದ್ದ. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಧಾನ ಆರೋಪಿ ಮಹಮ್ಮದ್ ಸಮೀರ್ ಯಾನೆ ಸಮೀರ್ ಕಡಪರ ಯಾನೆ ರೋಬರ್ಟ್, ಲಬೊಟ್ಟು ದಾವೂದ್ ಎಂಬಾತನ ಸಹಚರನಾಗಿದ್ದು, ಈತನ ಮೇಲೆ ನಾಲ್ಕು ಪ್ರಕರಣಗಳು ಈಗಾಗಲೇ ದಾಖಲಾಗಿದೆ. ಇರ್ಫಾನ್ ವಿರುದ್ಧ ನಾಲ್ಕು ಕೊಲೆ ಯತ್ನ ಸೇರಿ ಆರು ಪ್ರಕರಣಗಳು ದಾಖಲಾಗಿದೆ.

ಆರೋಪಿಗಳು ಮೂರು ತಿಂಗಳ ಕಾಲ ಪರಾರಿಯಾಗಿದ್ದು, ಹಣಕಾಸು ಮತ್ತು ವಾಹನದ ರೂಪದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- Advertisement -

Related news

error: Content is protected !!