Thursday, November 12, 2026
spot_imgspot_img
spot_imgspot_img

ಮಂಚಿ: ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ, ಮಂಚಿ ಶಕ್ತಿ ಕೇಂದ್ರದ ವತಿಯಿಂದ “ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ” ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆ

- Advertisement -
- Advertisement -

ಬಂಟ್ವಾಳ /ಮಂಚಿ :ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ತರುವಾಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದ್ದು, ಜನ ಸಾಮಾನ್ಯರು ಜೀವನ ಮಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕಾನೇಕ ಪಿಂಚಣಿಗಳು ರದ್ದು ಆಗಿದ್ದು ಫಲನುಭವಿಗಳು ಸೌಲಭ್ಯ ವಂಚಿತರಾಗಿದ್ದಾರೆ. ಪ್ರಸ್ತುತ ಆಶ್ರಯ ಯೋಜನೆಗಳು ಕೂಡ ಮಂಜೂರಗುತ್ತಿಲ್ಲ,… ಈ ಎಲ್ಲಾ ವಿಷಯಗಳ ಬಗ್ಗೆ ಬಿಜೆಪಿ ಜನಾಂದೋಲನ ಹಮ್ಮಿ ಕೊಂಡ್ಡಿದ್ದು ಆ ಪ್ರಯುಕ್ತ ಇಂದು ಬಿಜೆಪಿ ಮಂಚಿ ಶಕ್ತಿಕೇಂದ್ರ ಇದರ ವತಿಯಿಂದ ಪ್ರತಿಭಟನೆ ನಡೆಯಿತು. ಮಂಚಿ ಗ್ರಾಮದ ಕುಕ್ಕಾಜೆಯಿಂದ ಪಾದಯಾತ್ರೆ ಆರಂಭವಾಗಿ ಮಂಚಿ ಪಂಚಾಯತ್ ವಠಾರದಲ್ಲಿ ಸಂಪನ್ನ ಗೊಂಡಿತು.

ಬಂಟ್ವಾಳ ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ರಾಮದಾಸ್ ಬಂಟ್ವಾಳ ಅವರು ಪ್ರಧಾನ ಭಾಷಣಗೈದು ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳನ್ನು ಖಟುವಾಗಿ ಖಂಡಿಸಿದರು.ಈ ಸಂಧರ್ಭ ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕರೋಪಾಡಿಯವರು ಪ್ರಸ್ತಾವನೆಗೈದರು.ಪ್ರಮುಖರಾದ ರಮೇಶ್ ರಾವ್ ಮಂಚಿ ಇವರು ಸ್ವಾಗತಿಸಿದರು.

ಸಭೆಯಲ್ಲಿ ಮಂಡಲ ಕಾರ್ಯದರ್ಶಿ ವಿಜಯ ನಾಯಕ್,ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೇಶವ ರಾವ್. ಪ್ರಧಾನ ಕಾರ್ಯದರ್ಶಿ ಶಶಿಧರ್ ರೈ, ಮಂಚಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮೋಹನದಾಸ್ ಶೆಟ್ಟಿ. ಪಭಾರಿ ಹರಿಪ್ರಸಾದ್ ಭಂಡಾರಿಬೆಟ್ಟು,ಮಂಡಲ ಒಬಿಸಿ ಮೋರ್ಚಾ ದ ಜಯಕಿಶೋರ್,ಕೊಳ್ನಾಡು ಮಹಾಶಕ್ತಿ ಕೇಂದ್ರದ ಯುವ ಮೋರ್ಚಾ ಅಧ್ಯಕ್ಷ ರಾಜೇಶ್ ಕುಕ್ಕಾಜೆ.ಮಾಜಿ ಪಂಚಾಯತ್ ಅಧ್ಯಕ್ಷರಾದ ಪುಷ್ಪ ಕಾಮತ್, ಪ್ರಮೀಳಾ ಕಿಶೋರ್, ಪಂಚಾಯತ್ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರು, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಪಂಚಾಯತ್ ಸದಸ್ಯರು, ಕಾರ್ಯಕರ್ತರು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!