Thursday, November 12, 2026
spot_imgspot_img
spot_imgspot_img

ಐಸಿಎಆರ್-ಡಿಸಿಅರ್, ಪುತ್ತೂರು, ಆರ್‌ಕೆವಿವೈ-ರಫ್ತಾರ್ ಯೋಜನೆ, ಕರ್ನಾಟಕ ಸರ್ಕಾರ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತದ ವತಿಯಿಂದ “ಗೇರು ಸ್ಪೆಷಲ್” ಕಾರ್ಯಕ್ರಮ

- Advertisement -
- Advertisement -

ಭಾರತ ದೇಶದಲ್ಲಿ ಮೊದಲ ಬಾರಿಗೆ ಗೇರು ಮರದ ಚಿಗುರು ಮತ್ತು ಹೂಗಳಿಗೆ ಸಿಂಪಡಿಸುವ ತಂತ್ರಜ್ಞಾನದ ಉದ್ಘಾಟನೆ

ವಿಟ್ಲದ ಚಂದಳಿಕೆ ಯಲ್ಲಿರುವ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತದ ಕಚೇರಿಯಲ್ಲಿ ನ.12 ಗುರುವಾರದಂದು ಐಸಿಎಆರ್-ಡಿಸಿಅರ್, ಪುತ್ತೂರು, ಆರ್‌ಕೆವಿವೈ-ರಫ್ತಾರ್ ಯೋಜನೆ, ಕರ್ನಾಟಕ ಸರ್ಕಾರ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತದ ವತಿಯಿಂದ ನಡೆದ “ಗೇರು ಸ್ಪೆಷಲ್” ಕಾರ್ಯಕ್ರಮದಲ್ಲಿ ಭಾರತ ದೇಶದಲ್ಲಿ ಮೊದಲ ಬಾರಿಗೆ ಗೇರು ಮರದ ಚಿಗುರು ಮತ್ತು ಹೂಗಳಿಗೆ ಸಿಂಪಡಿಸುವ ತಂತ್ರಜ್ಞಾನವನ್ನು ಉದ್ಘಾಟಿಸಲಾಯಿತು

ಗೇರು ಸಂಶೋಧನಾ ನಿರ್ದೇಶನಾಲಯ ಐಸಿಎಆರ್ -ಡಿಸಿಆರ್ ಪುತ್ತೂರು ಇದರ ನಿರ್ದೇಶಕರಾದ ಡಾ. ಜೆ. ದಿನಕರ ಅಡಿಗರವರು ತಂತ್ರಜ್ಞಾನವನ್ನು ಉದ್ಘಾಟಿಸಿ ಮಾತನಾಡಿ,ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ಇದೀಗ ಒಂದು ಮಹತ್ತರವಾದ ಮೈಲುಗಲ್ಲನ್ನು ಸ್ಥಾಪಿಸಿದೆ. ಇಂದು ಬಿಡುಗಡೆ ಮಾಡಿರುವ ಪ್ರೋಡೆಕ್ಟ್ ಗೇರು ಬೆಳೆಗಾರರಿಗೆ ಬಹಳಷ್ಟು ಸಹಕಾರಿಯಾಗಲಿದೆ. ಭೂಮಿಯಲ್ಲಿ ನೀರಿನ ಅಂಶ ಕಡಿಮೆಯಾದಾಗ ನೀರು ಸಿಂಪಡಿಸಿದರೆ ಹೆಚ್ಚಿನ ಇಳುವರಿ ಸಿಗಲು ಸಾಧ್ಯ. ಗೇರು ಬೇಳೆ ಲಾಭದಾಯಕ ಬೆಳೆಯಾಗಿದ್ದು, ಅದು ಇನ್ನಷ್ಟು ಅಧಿಕವಾಗಲಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತದ ಅಧ್ಯಕ್ಷರಾದ ಎಂ. ಪ್ರಸಾದ್ ಶೆಟ್ಟಿ ರವರು ಮಾತನಾಡಿ ,ಗೇರು ಸ್ಪೆಷಲ್ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸವಾಗಬೇಕಿದೆ. ಅಡಿಕೆ ಬೆಳೆಗಳ ರೋಗಗಳು ಇಂದು ಸಂಪೂರ್ಣ ಹತೋಟಿಗೆ ತರುವಲ್ಲಿ ರೈತರು ವಿ಼ಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ರೈತರು ಗೇರು ಕೃಷಿಯತ್ತ ಹೆಚ್ಚು ಒಲವು ತೋರುವಂತಾಗಬೇಕು ಇದೊಂದು ರೈತರಿಗೆ ಆದಾಯ ತರುವ ಯೋಜನೆಯಾಗಿದೆ ಎಂದರು.

ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಡಾ.ವೀಣಾ ಜಿ.ಎಲ್. ರವರು ಮಾತನಾಡಿ ಏಳು ವರುಷಗಳಿಂದ ಪಟ್ಟ ಪರಿಶ್ರಮ ಇದಾಗಿದೆ. ಭಾರತದಾದ್ಯಂತ ತೆರಳಿ ಇದರ ಬಗ್ಗೆ ಸಂಶೋಧನೆ ಮಾಡಲಾಗಿದೆ. ಆ ಬಳಿಕ ಅದನ್ನು ಅಭಿವೃದ್ಧಿ ಪಡಿಸಿ ಎಲ್ಲಾ ಕಡೆಗಳಿಗೆ ತೆರಳಿ ಅಲ್ಲಿನ ರೈತರ ಜಾಗದಲ್ಲಿ ಅದನ್ನು ಸಿಂಪಡನೆ ಮಾಡಿ ರಿಸಲ್ಟ್ ಪಡೆದುಕೊಳ್ಳಲಾಗಿದೆ. ಗೇರು ಸ್ಪೆಷಲ್ ಗೇರು ಕೃಷಿಕರಿಗೆ ಒಂದು ಕೊಡುಗೆ. ಗೇರು ಮರದಲ್ಲಿ ಹೂ ಬಿಡುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆ ನಿವಾರಣೆಗೆ ಇದು ಬಹಳಷ್ಟು ಉಪಕಾರಿಯಾಗಿದೆ.ಇದು ಕೇವಲ ದ.ಕ.ಜಿಲ್ಲೆಗೆ ಸೀಮಿತವಾಗದೆ ಇಡೀ ಭಾರತಕ್ಕೆ ತಲುಪಿಸುವ ಪ್ರಯತ್ನ‌ ನಮ್ಮದಾಗಲಿದೆ ಎಂದರು.

ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಡಾ. ಅಶ್ವಥಿ ಚಂದ್ರಕುಮಾರ್ ರವರು ಮಾತನಾಡಿ ಗೇರು ರೈತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ನಾವು ಗೇರಿನ ನರ್ಸರಿ ಮಾಡುವ ಯೋಜನೆ ಇದೆ. ಕೃಷಿಕರ ಅಗತ್ಯತೆಗೆ ತಕ್ಕಂತೆ ಬೆಳೆಗಳನ್ನು ಮೌಲ್ಯವರ್ದನೆ ಮಾಡಲಾಗುವುದು ಎಂದರು.

ಸಂಸ್ಥೆಯ ಸಿಬ್ಬಂದಿ ನಿಶಾಮೋಹಿನಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

- Advertisement -

Related news

error: Content is protected !!