Thursday, April 25, 2024
spot_imgspot_img
spot_imgspot_img

ಮಂಗಳ ಗ್ರಹದಲ್ಲಿ ಪತ್ತೆಯಾಯ್ತು ಹಸಿರು ವರ್ಣದ ಬೆಳಕಿನ ಪುಂಜ..! ಈ ವಿದ್ಯಾಮಾನ ಹೇಗೆ ಸೃಷ್ಟಿಯಾಗುತ್ತದೆ..?

- Advertisement -G L Acharya panikkar
- Advertisement -
astr

ಸಂಯುಕ್ತ ಅರಬ್‌ ಸಂಸ್ಥಾನದ ಮಾರ್ಸ್ ಮಿಷನ್ (ಇಎಂಎಂ) ಮತ್ತು ನಾಸಾದ ಮಾವೆನ್ ನೌಕೆಗಳು ಮಂಗಳಗ್ರಹದ ಆಕಾಶದಲ್ಲಿ ಹಸಿರು ವರ್ಣದ ಸಣ್ಣ ಬೆಳಕಿನ ಪುಂಜವನ್ನು ಪತ್ತೆ ಮಾಡಿದೆ. ಖಭೌತ ವಿಜ್ಞಾನಿಗಳಿಗೆ ಕೆಂಪು ಗ್ರಹದ ವಾತಾವರಣದಲ್ಲಿನ ಕೌತುಕದ ಅಧ್ಯಯನಕ್ಕೆ ಹೊಸ ಒಳನೋಟವೊಂದನ್ನು ಒದಗಿಸಿವೆ.

ಇದು ಮಂಗಳ ಗ್ರಹದ ಆಕಾಶದಲ್ಲಿ ಕಂಡುಬಂದಿರುವ ನೈಸರ್ಗಿಕ ಬೆಳಕಿನ ಪುಂಜವಾಗಿದೆ. ಸೌರ ಮಾರುತವು ಮಂಗಳನ ಮೇಲಿನ ವಾತಾವರಣದ ಮೇಲೆ ನೇರ ಪರಿಣಾಮ ಬೀರಿದಾಗ ಮತ್ತು ಅದು ನಿಧಾನವಾಗಿ ನೇರಳಾತೀತ ಬೆಳಕನ್ನು ಹೊರಸೂಸಿದಾಗ ಈ ಹೊಸ ಬೆಳಕಿನ ಪುಂಜವು ರಚನೆಯಾಗುತ್ತದೆ. ಬೆಳಕಿನ ಪುಂಜ ಘಟಿಸಿದಾಗ, ಗ್ರಹದ ಸಣ್ಣ ಪ್ರದೇಶಗಳು ಹೆಚ್ಚು ಪ್ರಕಾಶಮಾನವಾಗುತ್ತವೆ ಎನ್ನುವುದನ್ನು ಈ ನೌಕೆಗಳು ಪತ್ತೆ ಮಾಡಿವೆ.

‘ನಮ್ಮ ಶೋಧನೆಯು ಪ್ರಸ್ತುತ ಇಎಂಎಂ ನೌಕೆ ಅಧ್ಯಯನ ಮಾಡುತ್ತಿರುವ ಸಂಗತಿಗಳ ದೀರ್ಘ ಪಟ್ಟಿಗೆ ಹೊಸ ಸೇರ್ಪಡೆ. ಮಂಗಳನಲ್ಲಿ ಹಗಲು ಹೇಗೆ ರೂಪುಗೊಳ್ಳುತ್ತದೆ ಎನ್ನುವುದಕ್ಕೆ ಈಗ ಸದ್ಯ ಅಸ್ತಿತ್ವದಲ್ಲಿರುವ ದೃಷ್ಟಿಕೋನಗಳಿಗೆ ಸಣ್ಣ ಬೆಳಕಿನ ಪುಂಜ ಸವಾಲೊಡ್ಡುತ್ತದೆ. ಮಂಗಳನ ವಾಯುಮಂಡಲದ ಮತ್ತು ಮ್ಯಾಗ್ನೆಟೋಸ್ಪೆರಿಕ್ ಡೈನಾಮಿಕ್ಸ್ ಬಗ್ಗೆ ನಮ್ಮ ಅರಿವು ವಿಸ್ತರಿಸುವ ಅನೇಕ ಅನಿರೀಕ್ಷಿತ ವಿದ್ಯಮಾನಗಳನ್ನು ಈ ನೌಕೆ ಪತ್ತೆ ಮಾಡಿದೆ. ಈಗ ನಾವು ಪತ್ತೆ ಮಾಡಿರುವ ಹೊಸ ಸಂಗತಿಗಳು, ಮಾವೆನ್ ನೌಕೆಯ ದತ್ತಾಂಶಗಳು ಜತೆಗೂಡಿ ವೈಜ್ಞಾನಿಕ ಸಂಶೋಧನೆಯ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿವೆ’ ಎಂದು ಇಎಂಎಂನ ವಿಜ್ಞಾನ ಮುಖ್ಯಸ್ಥೆ ಹೆಸ್ಸಾ ಅಲ್‌ ಮಾತ್ರೌಷಿ ಹೇಳಿದ್ದಾರೆ.

- Advertisement -

Related news

error: Content is protected !!