Friday, March 29, 2024
spot_imgspot_img
spot_imgspot_img

ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆಂದು ಹೇಳಿ ಹೋದ ಮಹಿಳೆ ಹಾಗೂ ಮಕ್ಕಳು ದಿಢೀರ್ ನಾಪತ್ತೆ; ಪತಿಯಿಂದ ದೂರು

- Advertisement -G L Acharya panikkar
- Advertisement -

ಅನಂತಪುರ: ಇಲ್ಲಿನ ಆಂಧ್ರಪ್ರದೇಶದ ಅನಂತಪುರದಲ್ಲಿ ಒಂದೇ ಕುಟುಂಬದ ನಾಲ್ವರು ದಿಢೀರ್ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಪತ್ತೆಯಾದ ಮಹಿಳೆ ಸೈಮೌನಿಕಾ ಹಾಗೂ ಲಿಖಿತ ಸರಣ್ಯ, ಲಿಖಿತ ಕಾರ್ತಿಕೇಯನ್​ ಮತ್ತು ಮನಿಕೃಷ್ಣ ಹೆಸರಿನ ಇಬ್ಬರು ಗಂಡುಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ.

ಅನಂತಪುರದ ಮಾರುತಿ ನಗರದ ನಿವಾಸಿಗಳಾದ ಸಂಗಮೇಶ್​ ಮತ್ತು ಸೈಮೌನಿಕಾ ದಂಪತಿ 2011ರಲ್ಲಿ ವಿವಾಹವಾಗಿದ್ದರು. ಸಂಗಮೇಶ್​ ಅವರು ಕುಟುಂಬದ ನಿರ್ವಹಣೆಗಾಗಿ ಖಾಸಗಿ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಸಂಗಮೇಶ್​ ಅವರ ಪತ್ನಿ ಸೇರಿದಂತೆ ತನ್ನ ಮೂವರು ಮಕ್ಕಳು ಕೂಡ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.

ಸಂಗಮೇಶ್​ ಪತ್ನಿ ಮೌನಿಕಾ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆಂದು ಹೇಳಿ ಸೋಮವಾರ ಬೆಳಗ್ಗೆ ಮನೆ ಬಿಟ್ಟವರು ಮತ್ತೆ ಮನೆಗೆ ಮರಳಿ ವಾಪಾಸು ಬಂದಿಲ್ಲ. ಈ ಬಗ್ಗೆ ಸಂಗಮೇಶ್ ಅವರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!