Monday, April 29, 2024
spot_imgspot_img
spot_imgspot_img

ಮಂಗಳೂರು: ಜಾನುವಾರು ಸಾಗಾಟ ನಿಷೇಧ; ಡಿಸಿ ಆದೇಶ

- Advertisement -G L Acharya panikkar
- Advertisement -
vtv vitla

ಮಂಗಳೂರು: ಕ್ಯಾಪ್ರಿಪಾಕ್ಸ್ ಎಂಬ ವೈರಾಣುವಿನಿಂದ ಹರಡುವ ಚರ್ಮಗಂಟು (ಲುಂಪಿ ಸ್ಕಿನ್ ಡಿಸೀಸ್) ರೋಗ ದನ ಮತ್ತು ಎಮ್ಮೆಗಳಲ್ಲಿ ಕಂಡುಬರುವ ವೈರಸ್ ಖಾಯಿಲೆಯಾಗಿದ್ದು, ರೋಗಗ್ರಸ್ಥ ಜಾನುವಾರುವಿನಿಂದ ಆರೋಗ್ಯವಂತ ಜಾನುವಾರುಗಳಿಗೆ ಹರಡುತ್ತಿದೆ.

ಜಿಲ್ಲೆಯಲ್ಲಿ 289 ಗ್ರಾಮಗಳಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡು ಬಂದಿರುತ್ತದೆ. ಈವರೆಗೆ 3,414 ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದು, 64 ಜಾನುವಾರುಗಳು ಮರಣ ಹೊಂದಿರುತ್ತದೆ.

ಜಾನುವಾರುಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಾಣಿಕೆ ಮಾಡುವುದರಿಂದ ರೋಗ ಹರಡುವ ಸಾಧ್ಯತೆ ಇರುವುದರಿಂದ ಈ ರೋಗದ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ಜಿಲ್ಲೆಯೊಳಗೆ ಮತ್ತು ಹೊರ ಜಿಲ್ಲೆ ಅಥವಾ ನೆರೆ ರಾಜ್ಯದಿಂದ ಜಿಲ್ಲೆಗೆ ಜಾನುವಾರುಗಳ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಆದೇಶಿಸಿದ್ದಾರೆ.

- Advertisement -

Related news

error: Content is protected !!