Tuesday, June 16, 2026
spot_imgspot_img
spot_imgspot_img

ಹೆಬ್ರಿ: ನದಿಗೆ ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ನೀರುಪಾಲು..!!

- Advertisement -
- Advertisement -

ಹೆಬ್ರಿ: ನದಿಗೆ ಸ್ನಾನಕ್ಕೆ ಇಳಿದಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಮತ್ತಾವು ಎಂಬಲ್ಲಿ ನಡೆದಿದೆ.

ಮೃತರನ್ನು ಕರ್ಜೆ ನಿವಾಸಿ ಉಮೇಶ್ ಶೆಟ್ಟಿ(48) ಹಾಗೂ ಚಾರಾ ಹುರ್ತುಕೆ ನಿವಾಸಿ ಪ್ರಸ್ತುತ್ ಹೆಗ್ಡೆ(21) ಎಂದು ಗುರುತಿಸಲಾಗಿದೆ.

ಪ್ರಸ್ತುತ್ ಹೆಗ್ಡೆ ಅಂತಿಮ ವರ್ಷ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದರು. ಇವರಿಬ್ಬರು ಸ್ನಾನಕ್ಕೆಂದು ಮತ್ತಾವು ನದಿಗೆ ತೆರಳಿದ್ದರು. ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಮೊಬೈಲ್ ಪೋನ್ ಗೆ ಕರೆ ಮಾಡಿದ್ದು, ಕರೆ ಸ್ವೀಕರಿಸದ ಕಾರಣ ಲೋಕೇಶನ್ ಪತ್ತೆ ಹಚ್ಚಿ ಹುಡುಕಾಟ ನಡೆಸಿದ್ದರು. ರಾತ್ರಿ 10:30ರ ಸುಮಾರಿಗೆ ಅವರಿಬ್ಬರ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!