Sunday, June 21, 2026
spot_imgspot_img
spot_imgspot_img

ಮಗಳ ಪ್ರೀತಿಗೆ ವಿರೋಧ..! ಹೆತ್ತ ಮಗಳನ್ನೇ ಗಂಟಲು ಸೀಳಿ ಕೊಂದ ತಂದೆ..!

- Advertisement -
- Advertisement -

ತಂದೆಯೊಬ್ಬ ತನ್ನ 19 ವರ್ಷದ ಮಗಳನ್ನು ಗಂಟಲು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ. ಮಗಳ ಪ್ರೇಮ ಸಂಬಂಧದ ಕಾರಣಕ್ಕೆ ಮರ್ಯಾದಾ ಹತ್ಯೆ ಮಾಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಮನೋಜ್ ರಾಥೋಡ್ ಬಂಧಿತ ಆರೋಪಿ. ಪೊಲೀಸರು ಅಪರಾಧಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ.

ತಂದೆ ಮನೋಜ್ ರಾಥೋಡ್ ಅವರು ಇಟಾಹ್‌ನ ವ್ಯಕ್ತಿಯೊಂದಿಗೆ ತಮ್ಮ ಮಗಳು ರುಚಿಯ ಸಂಬಂಧದ ಬಗ್ಗೆ ಅರಿವಿಗೆ ಬಂದಿದೆ. ತಂದೆ ಮಗಳಿಗೆ ಪ್ರಿಯಕರನನ್ನು ಭೇಟಿಯಾಗದಂತೆ ಕೇಳಿಕೊಂಡಿದ್ದಾರೆ. ಆದರೆ ಮಗಳು ಈ ಸಲಹೆಯನ್ನು ಕೇಳದೆ ತಿರಸ್ಕರಿಸಿದ್ದಳು. ಇದರಿಂದ ರೊಚ್ಚಿಗೆದ್ದ ತಂದೆ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಮಗಳ ಕೋಣೆಗೆ ನುಗ್ಗಿ ಕೊಲೆ
ಇದರಿಂದ ಕೋಪಗೊಂಡ ರಾಥೋಡ್ ಮನೆಯ ಮೇಲಿನ ಮಹಡಿಯಲ್ಲಿರುವ ಮಗಳ ಕೋಣೆಗೆ ನುಗ್ಗಿ ಆಕೆಯ ಕತ್ತು ಸೀಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

- Advertisement -

Related news

error: Content is protected !!