Monday, July 27, 2026
spot_imgspot_img
spot_imgspot_img

ಉಡುಪಿ: ವ್ಯಾಪಾರಿಯ ಲಕ್ಷಾಂತರ ರೂ. ನಗದು ಕಳವು; ಪ್ರಕರಣ ದಾಖಲು

- Advertisement -
- Advertisement -

ಉಡುಪಿ: ವ್ಯಾಪಾರಿಯೊಬ್ಬರ ಲಕ್ಷಾಂತರ ರೂ. ನಗದು ಇದ್ದ ಬ್ಯಾಗ್ ಕಳವು ಮಾಡಿರುವ ಘಟನೆ ಕೋಟದ ಶಿರಿಯಾರ ಎಂಬಲ್ಲಿ ನಡೆದಿದೆ.

ಶಿರಿಯಾರದ ಬಿ.ರವಿಶಂಕರ ಭಟ್ ಎಂಬವರು ಶಿರಿಯಾರ ಪೇಟೆಯಲ್ಲಿ ವಿನಾಯಕ ಸ್ಟೋರ್ ಎಂಬ ಹೆಸರಿನ ದಿನಸಿ ಅಂಗಡಿ ವ್ಯವಹಾರ ನಡೆಸಿಕೊಂಡಿದ್ದು ಅ.23ರಂದು ರಾತ್ರಿ ಅಂಗಡಿ ವ್ಯವಹಾರ ಮುಗಿಸಿ ವ್ಯವಹಾರದ 1,25,000ರೂ. ಹಣವನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಅಂಗಡಿಗೆ ಬೀಗವನ್ನು ಹಾಕಿದ್ದು, ಬಳಿಕ ಮನೆಗೆ ಬಂದು ಮನೆಯ ಸಿಟೌಟ್ ನಲ್ಲಿ ಬ್ಯಾಗ್ ನ್ನು ಇರಿಸಿ ಕಾಲು ತೊಳೆಯಲು ಹೋಗಿದ್ದರು.

ಈ ವೇಳೆ ಅಪರಿಚಿತ ಕಳ್ಳರು ಸಿಟೌಟ್ ನಲ್ಲಿದ್ದ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!