Thursday, April 18, 2024
spot_imgspot_img
spot_imgspot_img

ಮಡಿಕೇರಿ: ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ ಮಾಡಿದ ಖದೀಮರು..!

- Advertisement -G L Acharya panikkar
- Advertisement -

ಕೊಡಗು: ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಳಕೇರಿ ಗ್ರಾಮದಲ್ಲಿ ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ ಮಾಡಿರುವ ಘಟನೆ ನಡೆದಿದೆ. ವೃದ್ಧೆಯರಾದ ಜಾನಕಿ(78) , ಅಮ್ನಕ್ಕಿ (68)ಯನ್ನು ಬೆದರಿಸಿ, ಅವರ ಕೈಕಾಲು ಕಟ್ಟಿ ದರೋಡೆ ಮಾಡಿದ್ದಾರೆ.

vtv vitla
ವೃದ್ಧೆಯರು

ಸೋಮವಾರ ತಡರಾತ್ರಿ ನಾಲ್ವರು ಅಪರಿಚಿತರು ಸಹೋದರಿಯರಾದ ಜಾನಕಿ ಮತ್ತು ಅಮ್ಮಕ್ಕಿ ಅವರ ಮನೆಯ ಬಾಗಿಲು ಮುರಿದದು ಒಳಗೆ ನುಗ್ಗಿದ್ದಾರೆ. ಜಾನಕಿ ಹಾಗೂ ಅಮ್ಮಕ್ಕಿಗೆ ಕೊಲೆ ಬೆದರಿಕೆಯೊಡ್ಡಿ ಇಬ್ಬರನ್ನು ಕೋಣೆಯೊಳಗೆ ಕಟ್ಟಿ ಹಾಕಿದ್ದಾರೆ. ನಂತರ ರೂ. 2 ಲಕ್ಷ 50 ಸಾವಿರ ನಗದು ಹಾಗೂ 83 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

vtv vitla


ಘಟನೆ ಬಳಿಕ
ಕೈಗೆ ಕಟ್ಟಿದ ಹಗ್ಗವನ್ನು ಬಿಚ್ಚಿಕೊಂಡ ವೃದ್ಧೆಯರು ನಂತರ ಸಹೋದರ ಬೋಪಯ್ಯ ಅವರಿಗೆ ಕರೆ ಮಾಡಿ ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಸಹೋದರಿಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆಗಾಗಿ ನಾಪೋಕ್ಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!