Friday, June 27, 2025
spot_imgspot_img
spot_imgspot_img

ಮಣಿಪಾಲ: ನಿಮ್ಮ ಖಾತೆಗೆ 25 ಸಾವಿರ ಹಣ ಕಳುಹಿಸಿದ್ದೇವೆ.‌.!! ತಂದೆಯ ಸ್ನೇಹಿತ ಎಂದು ಹೇಳಿಕೊಂಡು ಲಕ್ಷಾಂತರ ಪಂಗನಾಮ ಹಾಕಿದ ಖತರ್ನಾಕ್ ವ್ಯಕ್ತಿ

- Advertisement -
- Advertisement -

ಅಪರಿಚಿತ ವ್ಯಕ್ತಿಯೋರ್ವ ತಂದೆಯ ಸ್ನೇಹಿತ ಎಂದು ಕರೆ ಮಾಡಿ ಹಂತ ಹಂತವಾಗಿ ಲಕ್ಷಾಂತರ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. ಕರೆ ಮಾಡಿದ ಆಸಾಮಿ ತಪ್ಪಾಗಿ ನಿಮ್ಮ ಖಾತೆಗೆ ಹಣ ಬಿದ್ದಿದೆ ಅದನ್ನು ಹಿಂತಿರುಗಿಸಿ ಎಂಬುದಾಗಿ ತಿಳಿಸಿದ್ದಾನೆ. ಅಷ್ಟು ಮಾತ್ರವಲ್ಲದೆ ಹಣ ವರ್ಗಾವಣೆ ಮಾಡಿದರೂ ಅದು ಜಮೆ ಆಗಿಲ್ಲ ಎಂದು ಹಂತ ಹಂತವಾಗಿ 2,13,999 ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಬಗ್ಗೆ ಮಣಿಪಾಲ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಮಣಿಪಾಲದ ಕೆಎಂಸಿ ಹಾಸ್ಟೆಲ್ ನಲ್ಲಿ ವಾಸ ಮಾಡಿಕೊಂಡಿರುವ ಚಿತ್ರಾಂಗ್ ಜುನಿವಾಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.‌

ಘಟನೆ ವಿವರ: 2022 ರ ಡಿ.25 ರಂದು ಅಪರಿಚಿತ ವ್ಯಕ್ತಿಯೋರ್ವ ಇವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ತಾನು ನಿಮ್ಮ ಅಂಕಲ್ ನಿನ್ನ ತಂದೆ ನಂಬ ಕೊಟ್ಟಿರುವುದಾಗಿ ಹೇಳಿ, ನಿಮ್ಮ ಖಾತೆಗೆ ತಪ್ಪಾಗಿ ರೂ. 25,000 ಹಣ ಡೆಪೋಸಿಟ್ ಆಗಿದೆ ಅದನ್ನು ಕೂಡಲೇ ಪೇಟಿಎಂ ಮೂಲಕ ಹಿಂತಿರುಗಿಸುವಂತೆ ತಿಳಿಸಿದ್ದರು. ಇದನ್ನು ನಂಬಿದ ಚಿತ್ರಾಂಗ್ ಜುನಿವಾಲ್ ರವರು ಆತನು ಸೂಚಿಸಿರುವ ನಂಬರಿಗೆ ಪೇಟಿಂ ಮೂಲಕ ರೂ.24,500/- ಹಣ ವರ್ಗಾವಣೆ ಮಾಡಿರುತ್ತಾರೆ.

ಆದರೆ, ಸದ್ರಿ ಹಣ ಖಾತೆಗೆ ಜಮೆ ಆಗಿಲ್ಲವೆಂದು ಅಪರಿಚಿತ ವ್ಯಕ್ತಿ ಚಿತ್ರಾಂಗ್ ಜುನಿವಾಲ್ ರವರಿಗೆ ಪದೇ ಪದೇ ಕರೆ ಮಾಡಿ ತಿಳಿಸಿ ಹಂತ ಹಂತವಾಗಿ ಒಟ್ಟು 2,13,999 ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!