Saturday, April 20, 2024
spot_imgspot_img
spot_imgspot_img

ಕೋವಿಡ್ ಲಸಿಕೆಯನ್ನು ತೇಜಸ್ವಿ ಸೂರ್ಯ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ…!? – ಕಾಂಗ್ರೆಸ್ ಆರೋಪ

- Advertisement -G L Acharya panikkar
- Advertisement -

ಕೋವಿಡ್-19 ಲಸಿಕೆಗಳನ್ನು ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳತ್ತ ಸಾಗಿಸುತ್ತಿರುವುದರ ಹಿಂದೆ ಸಂಸದ ತೇಜಸ್ವಿ ಸೂರ್ಯ ಹಾಗೂ ರವಿ ಸುಬ್ರಹ್ಮಣ್ಯ ಅವರ ಪಾತ್ರವಿದೆ ಎಂದು ಆಪಾದಿಸಿರುವ ಕಾಂಗ್ರೆಸ್, ಇಬ್ಬರನ್ನೂ ಬಂಧಿಸಬೇಕೆಂದು ಆಗ್ರಹಿಸಿದೆ.

ಖಾಸಗಿ ಆಸ್ಪತ್ರೆಯೊಂದರ ಉಸ್ತುವಾರಿದಾರರದ್ದು ಎನ್ನಲಾದ ದನಿಯ ಆಡಿಯೋ ರೆಕಾಡಿರ್ಂಗ್ ಒಂದನ್ನು ಬಹಿರಂಗಪಡಿಸಿದ ಕಾಂಗ್ರೆಸ್ ನಾಯಕರು, ಕೋವಿಡ್ ಲಸಿಕೆಯ ಪ್ರತಿಯೊಂದು ಡೋಸ್‍ಗೂ 700 ರೂಪಾಯಿಗಳನ್ನು ತೇಜಸ್ವಿ ಸೂರ್ಯರ ಚಿಕ್ಕಪ್ಪ, ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯಗೆ ಪಾವತಿ ಮಾಡಬೇಕೆಂದು ಆಡಿಯೋದಲ್ಲಿ ಹೇಳಿರುವುದಾಗಿ ಆಪಾದಿಸಿದ್ದಾರೆ.

“ಲಸಿಕೆಗೆ 900 ರೂ. ಖರ್ಚಾಗಲಿದ್ದು, ಇದಲ್ಲಿ 700 ರೂ.ಗಳನ್ನು ತೇಜಸ್ವಿ ಸೂರ್ಯನ ಚಿಕ್ಕಪ್ಪ, ಬಸನವಗುಡಿಯ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯಗೆ ನೀಡಬೇಕೆಂದು ಆಸ್ಪತ್ರೆಯೊಂದರ ಮೇಲುಸ್ತುವಾರಿಯೊಬ್ಬರು ಹೇಳುತ್ತಿರುವುದು ಆಡಿಯೋ ರೆಕಾಡಿರ್ಂಗ್‍ನಲ್ಲಿ ದಾಖಲಾಗಿದೆ” ಎಂದು ಕಾಂಗ್ರೆಸ್ ವಕ್ತಾರ ಪವನ್ನ ಖೇರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.


ನಿರ್ದಿಷ್ಟ ಆಸ್ಪತ್ರೆಯೊಂದರಲ್ಲೇ ಲಸಿಕೆ ಹಾಕಿಸಿಕೊಳ್ಳಿ ಎಂದು ಸೂರ್ಯ ಅವರು ಜಾಹೀರಾತುಗಳನ್ನೂ ಹಾಕಿರುವುದಾಗಿ ಆಪಾದನೆ ಮಾಡಿರುವ ಕಾಂಗ್ರೆಸ್, ಇಬ್ಬರ ವಿರುದ್ಧವೂ ಎಫ್‍ಐಆರ್ ದಾಖಲಿಸಿ ಬಂಧಿಸಬೇಕೆಂದು ಹೇಳಿದೆ.

driving
- Advertisement -

Related news

error: Content is protected !!