Monday, June 22, 2026
spot_imgspot_img
spot_imgspot_img

ಮತ್ತೆ ತೆರೆಮೇಲೆ ಬರುತ್ತಿದೆ ಶ್ರೀರಸ್ತು ಶುಭಮಸ್ತು..! ಕಿರುತೆರೆಗೆ ಮರಳುತ್ತಿದ್ದಾರೆ ಚಂದನವನದ ಸುಂದರಿ ಸುಧಾರಾಣಿ

- Advertisement -
- Advertisement -

ಜೀ ಕನ್ನಡ ವಾಹಿನಿಯು ಸದಾ ಭಿನ್ನ ಪ್ರಯೋಗದ ಮೂಲಕ ವಿಭಿನ್ನ ಕಥೆಗಳನ್ನು ಹೆಣೆದ ಧಾರವಾಹಿಗಳಿಂದ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮತ್ತೊಂದು ಹೊಸ ಒಂದು ಧಾರಾವಾಹಿ ಪ್ರಾರಂಭವಾಗಲಿದೆ. ಈ ಧಾರವಾಹಿಯ ವಿಶೇಷತೆ ಏನೆಂದರೆ ಚಂದನವನದ ಸುಂದರಿ ಸುಧಾರಾಣಿಯವರು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಅದ್ಬುತ ನಟನೆಯಿಂದ ಇವರು ದಶಕಗಳಿಂದ ಪ್ರೇಕ್ಷಕರ ಪ್ರೀತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತೆ ತೆರೆ ಮೇಲೆ ಶ್ರೀರಸ್ತು ಶುಭಮಸ್ತು..!
ಹಳೇ ಹೆಸರನ್ನು ಇಟ್ಟುಕೊಂಡು ಹೊಸ ಕಥೆಯೊಂದಿಗೆ ಮತ್ತೆ ತೆರೆ ಮೇಲೆ ಬಂದ ಕಥೆಗಳು ಇದೇ ಮೊದಲೇನಲ್ಲ. ಜೊತೆ ಜೊತೆಯಲಿ, ರಾಧಾ ಕಲ್ಯಾಣ ಹೀಗೆ ಈ ಹಿಂದೆಯೂ ಹಳೇ ಧಾರವಾಹಿಗಳ ಹೆಸರನ್ನಿಟ್ಟು ಪ್ರೇಕ್ಷಕರಿಗೆ ಮನೋರಂಜನೆ ನೀಡಿದ್ದಂತೂ ಸುಳ್ಳಲ್ಲ. ಆರು ಅತ್ತೆಯಂದಿರು ಅರ್ಪಿಸುವ ಶ್ರೀರಸ್ತು ಶುಭವಸ್ತು ಹಲವು ವರ್ಷಗಳ ಹಿಂದೆ ತೆರೆ ಮೇಲೆ ಬಂದಿತ್ತು. ಈಗ ಮತ್ತದೇ ಹೆಸರಿನಲ್ಲಿ ತೆರೆಯಲ್ಲಿ ಕಾಣಿಸಿಕೊಳ್ಳಲಿದೆ.

ಮುಖ್ಯ ಪೋಷಕ ನಟಿಯಾಗಿ ಸುಧಾರಾಣಿ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ ಪೋಷಕ ನಟಿಯಾಗಿ ಸುಧಾರಾಣಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ವಾಹಿನಿಯು ಪ್ರೋಮೊವನ್ನು ಹರಿ ಬಿಟ್ಟಿದ್ದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಅಂದ ಹಾಗೆ ಸುಧಾರಾಣಿಯವರು ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಮ್ಮನೆ ಯುವರಾಣಿ ಖ್ಯಾತಿಯ ದೀಪಕ್ ಬಿ.ಆರ್ ಗೌಡ ನಾಯಕ ನಟ
ಈ ಧಾರಾವಾಹಿಯ ನಾಯಕ ನಟನಾಗಿ ನಮ್ಮನೆ ಯುವರಾಣಿ ಖ್ಯಾತಿಯ ಅನಿಕೇತ್ ಅಲಿಯಾಸ್ ದೀಪಕ್ ಬಿ.ಆರ್ ಗೌಡ ಅವರು ಅಭಿನಯಿಸುತ್ತಿದ್ದಾರೆ. ನಮ್ಮನೆ ಯುವರಣಿ ತಂಡದಿಂದ ಹೊರ ಬಂದ ಬಳಿಕ ಇದು ಅವರ ಮೊದಲ ಪ್ರಾಜೆಕ್ಟ್ ಎನ್ನುವುದು ವಿಶೇಷ. ನೀಲಾ ಪ್ರೊಡಕ್ಷನ್ ನಿರ್ಮಾಣದಲ್ಲಿ ಬರುತ್ತಿರುವ ಧಾರಾವಾಹಿ ಬಗ್ಗೆ ಪ್ರೇಕ್ಷಕರಲ್ಲಿ ಅತಿಯಾದ ಕುತೂಹಲವಾಗಿದೆ ಎಂದರೆ ಸುಳ್ಳಾಗದು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಬೆಟ್ಟದ ಹೂವು ದಾರಾವಾಹಿಯಲ್ಲಿ ದೀಪ್ತಿ ಪಾತ್ರವನ್ನು ನಿರ್ವಹಿಸುತ್ತಿರುವ ಚಂದನ ರಾಘವೇಂದ್ರ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಪ್ರೋಮೊದಲ್ಲಿ ಕಾಣಿಸಿರುವ ಅಂತೆ ನಟಿ ಸುಧಾರಾಣಿ ಅವರು ಧಾರಾವಾಹಿಯಲ್ಲಿ ತುಳಸಿ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅದೇ ರೀತಿ ಒಂದು ಹೆಣ್ಣು ತಾಯಿಯಾಗಿ ಸೊಸೆಯಾಗಿ ಮನೆ ಹೀಗೆ ನಿಭಾಯಿಸಿಕೊಂಡು ಹೋಗುತ್ತಾಳೆ ಎನ್ನುವ ಬಗ್ಗೆ ಪ್ರೋಮೋದಲ್ಲಿ ತಿಳಿಸಿಕೊಟ್ಟಿದ್ದಾರೆ.

- Advertisement -

Related news

error: Content is protected !!