Friday, April 26, 2024
spot_imgspot_img
spot_imgspot_img

ಮತ್ತೆ ಪ್ರತ್ಯಕ್ಷನಾದ ಡ್ರೋನ್‌ ಪ್ರತಾಪ..! ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದ ನೆಟ್ಟಿಗರು

- Advertisement -G L Acharya panikkar
- Advertisement -
vtv vitla

ಬೆಂಗಳೂರು: ನಾನೊಬ್ಬ ಯುವ ವಿಜ್ಞಾನಿ, ಡ್ರೋನ್​ ತಯಾರಿಸಿ ಸಾಧಿಸಿ ತೋರಿಸಿದ್ದೇನೆ ಎಂದು ಕಾಗೆ ಹಾರಿಸಿ ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ಮಾಧ್ಯಮಗಳನ್ನು ಯಾಮಾರಿಸಿ, ಕಣ್ಮರೆಯಾಗಿದ್ದ ಡ್ರೋನ್‌ ಪ್ರತಾಪ ಎರಡು ವರ್ಷಗಳ ನಂತರ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದನೆ.

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರತ್ಯಕ್ಷರಾಗಿರುವ ಪ್ರತಾಪ್​, ಈ ಬಾರಿ ಹೊಸದಾಗಿ ಏನೋ ಪ್ರಾರಂಭಿಸುತ್ತಿರುವಂತೆ ಮುನ್ಸೂಚನೆ ನೀಡಿದ್ದಾರೆ. ಟೇಬಲ್​ ಮೇಲೊಂದು ಲ್ಯಾಪ್​ಲಾಪ್​ ಇಟ್ಟು, ಅದಕ್ಕೆ ಡಾಟಾ ಕೇಬಲ್​ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡು, ಎರಡು ಕೈಗಳಿಗೆ ಹಳದಿ ಬಣ್ಣದ ರಕ್ಷಾ ಕವಚ ಹಾಗೂ ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಸಾಲ್ಡರಿಂಗ್ ಮೆಶಿನ್​ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್​ ನೀಡಿದ್ದಾನೆ. ಟೇಬಲ್​ ಮೇಲೆ ಇನ್ನಿತರ ಎಲೆಕ್ಟ್ರಾನಿಕ್​ ಉಪಕರಣಗಳಿವೆ. ಟೇಬಲ್​ನ ಒಂದು ಬದಿಯಲ್ಲಿ ಡ್ರೋನ್​ ಕ್ಯಾಮೆರಾದ ಅರ್ಧ ಚಿತ್ರ ಕಾಣುತ್ತದೆ.

ಈ ಬಾರಿ ಡ್ರೋನ್​ ಪ್ರತಾಪ್​ ಯಾವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿಲ್ಲ. ಆದರೆ, ‘ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ’ ಎಂಬ ಅಡಿಬರಹವನ್ನು ಡ್ರೋನ್​ ಪ್ರತಾಪ್​ ನೀಡಿದ್ದಾರೆ. ಸದ್ಯ ಪ್ರತಾಪ್​ ಅವರ ಹೊಸ ಅವತಾರ ವೈರಲ್​ ಆಗಿದ್ದು, ಫೋಟೋ ನೋಡಿದ ನೆಟ್ಟಿಗರು ಪ್ರತಾಪ್​ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬಗೆಬಗೆಯ ಕಾಮೆಂಟ್​ಗಳೊಂದಿಗೆ ಕಾಲೆಳೆಯುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಕಾಮೆಂಟ್ಸ್‌ಗಳು

ಈ ಬಾರಿ ಯಾವ ರಾಕೆಟ್​ ಹಾರಿಸ್ತೀರಾ ಅಣ್ಣಾ ಎಂದು ನೆಟ್ಟಿಗರೊಬ್ಬರು ಕೇಳಿದರೆ, ಇನ್ನೊಬ್ಬ ಅಣ್ಣಾ ಮಿಕ್ಸಿ ರಿಪೇರಿ ಮಾಡುತ್ತಿದ್ದೀರಾ ಎಂದಿದ್ದಾರೆ. ಕಾಗೆ ಪ್ರತಾಪ ಎಂದು ಮಗದೊಬ್ಬ ನೆಟ್ಟಿಗ ವ್ಯಂಗ್ಯವಾಡಿದ್ದಾರೆ. ಅಣ್ಣಾ ಅವರು ಯೂಟ್ಯೂಬ್​ ನೋಡ್ಕೊಂಡು ಡ್ರೋನ್​ ಮಾಡ್ತಿದ್ದಾರೆ, ಅವು ಸಿಗ್ನಲ್​ ಕೊಟ್ಟಿದ್ದಾನೆ ಅಂದ್ರೆ ಏನೋ ದೊಡ್ಡದಾಗಿ ನಡೆಯುತ್ತದೆ ಎಂದು ಕೆಜಿಎಫ್​ ಶೈಲಿಯಲ್ಲಿ ಕಾಮೆಂಟ್​ ಮಾಡಿ ಕಿಚಾಯಿಸಿದ್ದಾರೆ. ಬ್ರೋ ತುರ್ತಾಗಿ ಶಿವಮೊಗ್ಗದಿಂದ ವಿಜಯಪುರಕ್ಕೆ ಒಂದು ಬ್ಲಡ್​ ಬಾಟಲ್​ ಕಳುಹಿಸಬೇಕಿತ್ತು. 10 ನಿಮಷದಲ್ಲಿ ಕಳುಹಿಸಬೇಕು. ನಿಮ್ಮ ಡ್ರೋಣ್​ ಕಳುಹಿಸಿ, ನಮಗೆ ಸಹಾಯವಾಗುತ್ತೆ ಎಂಬಿತ್ಯಾದಿ ಬಗೆಬಗೆಯ ಕಾಮೆಂಟ್​ಗಳ ಮೂಲಕ ಡ್ರೋನ್​… ಅಲ್ಲ ಅಲ್ಲ ಕಾಗೆ ಪ್ರತಾಪ್​ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಡ್ರೋನ್‌ ಪ್ರತಾಪ್‌ನ ಹಿನ್ನಲೆ

ಮಾತಿನ ಕಲೆ ಗೊತ್ತಿದ್ದರೆ ಯಾರನ್ನು ಬೇಕಾದರೂ ಮೂರ್ಖರನ್ನಾಗಿಸಬಹುದು ಎಂಬುದನ್ನು ನಿರೂಪಿಸಿ, ಸಮಸ್ತ ಕನ್ನಡಿಗರಿಗೆ ಕಾಗೆ ಹಾರಿಸಿದ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್, ಈ ಹಿಂದೆ ಬಡತನದ ಬಗ್ಗೆ ಕಟ್ಟಿದ್ದು ಸತ್ಯದ ತಲೆಯ ಮೇಲೆ ಹೊಡೆಯುವಂತೆ ಕಟ್ಟುಕತೆ. ತನ್ನದು ಬಡ ಕುಟುಂಬ. ತಾನು ಬಹಳ ಕಷ್ಟಗಳನ್ನು ಅನುಭವಿಸಿದ್ದಾಗಿ ಪ್ರತಾಪ್ ಈ ಹಿಂದೆ ಹೇಳಿಕೊಂಡಿದ್ದ. ಆದರೆ ವಾಸ್ತವದಲ್ಲಿ ಆತನ ಕುಟುಂಬ ಬಡತನದ ಬೇಗೆಯಲ್ಲೇನು ಬೇಯುತ್ತಿಲ್ಲ. ಪ್ರತಾಪ್ ತಾಯಿಯ ತಂದೆ (ತಾತ) ಸರ್ಕಾರಿ ನೌಕರಿಯಲ್ಲಿದ್ದರು. ಪ್ರತಾಪ್ ದೊಡ್ಡಪ್ಪ ಅಮೆರಿಕದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರ್ ಆಗಿದ್ದರು. ಅವರ ಪುತ್ರ ಕೋಲ್ಕತ್ತಾದಲ್ಲಿ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದಾರೆ.

ಪ್ರತಾಪ್ ತಂದೆ, ತಾಯಿ ರೇಷ್ಮೆ ಬೆಳೆಗಾರರಾಗಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪ್ರತಾಪ್ ಮಳವಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾನೆ. ಜೆಎಸ್​ಎಸ್ ಕಾಲೇಜಿನಲ್ಲಿ ಬಿಎಸ್​ಸಿ ವಿದ್ಯಾಭ್ಯಾಸ ಮಾಡುತ್ತಿದ್ದವನಿಗೆ ಹಣ ಮಾಡುವ ಐಡಿಯಾ ಬಂದಿತು. ಸರಿಯಾಗಿ ತರಗತಿಗೆ ಬಾರದ ಈತ ಏನೋ ಸಂಶೋಧನೆ ಮಾಡುತ್ತಿದ್ದಾನೆಂದು ಭಾವಿಸಿ ಉಪನ್ಯಾಸಕರ ಜತೆಗೆ ಮಠದವರು ಕೂಡ ಆರ್ಥಿಕ ನೆರವು ನೀಡಿದ್ದಾರೆ. ಜರ್ಮನಿಯಲ್ಲಿ ಡ್ರೋನ್ ಪ್ರದರ್ಶನ ಮಾಡಲಿಕ್ಕೆ ಜೆಎಸ್​ಎಸ್ ಮಠ 8 ಲಕ್ಷ ರೂ., ವಿದ್ಯಾಸಂಸ್ಥೆಯ ಎಲ್ಲ ಉಪನ್ಯಾಸಕರು ಆರ್ಥಿಕ ನೆರವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದ್ಭುತವಾದ ಡ್ರೋನ್ ಕಂಡುಹಿಡಿದಿರುವುದಾಗಿ ಹೇಳುವ ಪ್ರತಾಪ್, ತನ್ನ ಡ್ರೋನ್ ಅನ್ನು ಯಾರಿಗೂ ತೋರಿಸಿಲ್ಲ. ನೆರವು ನೀಡಿದ ಮಠದ ಶ್ರೀಗಳು ಸುತ್ತೂರು ಜಾತ್ರೆಯಲ್ಲಿ ಪ್ರದರ್ಶನಕ್ಕೆ ಇಡುವಂತೆ ಹೇಳಿದಾಗ ಅದರ ಪೇಟೆಂಟ್ ಮಿಸ್ ಆಗಿಬಿಡುತ್ತದೆ ಎಂದು ನೆಪ ಹೇಳಿ ತಪ್ಪಿಸಿಕೊಂಡಿದ್ದ. ತನ್ನ ಡ್ರೋನ್ ಬಗ್ಗೆ ಯಾವುದೇ ವಿಡಿಯೋ, ಫೋಟೋಗಳನ್ನು ಕೂಡ ಸಂಸ್ಥೆಗಾಗಲಿ, ಮಾಧ್ಯಮಗಳಿಗಾಗಲಿ ಈ ತನಕ ತೋರಿಸಿಲ್ಲ.

- Advertisement -

Related news

error: Content is protected !!