Thursday, April 25, 2024
spot_imgspot_img
spot_imgspot_img

ಮದರಸಾ​ ಶಿಕ್ಷಕನಿಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; 67 ವರ್ಷ ಶಿಕ್ಷೆ ನೀಡಿದ ಕೋರ್ಟ್​​​

- Advertisement -G L Acharya panikkar
- Advertisement -

ಮದರಸಾದಲ್ಲಿ ವ್ಯಾಸಂಗಮಾಡುತ್ತಿದ್ದ ಬಾಲಕನನ್ನು ಒತ್ತೆಯಾಳಾಗಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳದ ತ್ವರಿತ ನ್ಯಾಯಾಲಯವು ಮದರಸಾ ಶಿಕ್ಷಕನಿಗೆ ಒಟ್ಟು 67 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಶಿಕ್ಷೆಯು ಏಕಕಾಲದಲ್ಲಿ ಜಾರಿಯಾಗುವುದರಿಂದ ಅಪರಾಧಿ ಕೇವಲ 20 ವರ್ಷಗಳನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ. ವಿಶೇಷ ನ್ಯಾಯಾಧೀಶ ಸತೀಶ್ ಕುಮಾರ್ ವಿ ಅವರು 52 ವರ್ಷದ ಶಿಕ್ಷಕನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಶಿಕ್ಷಣ ಸಂಸ್ಥೆಯೊಂದರ ಸಿಬ್ಬಂದಿಯಾಗಿ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ ಕಾಯಿದೆಯಡಿ ಸೇರಿದಂತೆ ವಿವಿಧ ಅಪರಾಧಗಳಿಗೆ ಆರೋಪಿಗೆ ಒಟ್ಟು 67 ವರ್ಷಗಳ ಕಾಲ ಶಿಕ್ಷೆ ವಿಧಿಸಿದರು.

ನ್ಯಾಯಾಲಯವು ಐಪಿಸಿಯ 377 ರ ಅಡಿ ಅಸ್ವಾಭಾವಿಕ ಲೈಂಗಿಕ ಅಪರಾಧಕ್ಕಾಗಿ ಶಿಕ್ಷಕನನ್ನು ದೋಷಿ ಎಂದು ಘೋಷಿಸಿದೆ. ಆದರೆ, ಸಾಮಾನ್ಯ ಷರತ್ತು ಕಾಯಿದೆಯ ಸೆಕ್ಷನ್ 26 ರ ಅಡಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅದಕ್ಕೆ ಪ್ರತ್ಯೇಕ ಶಿಕ್ಷೆ ನೀಡಲಿಲ್ಲ. ಈ ಶಿಕ್ಷೆಯು ಏಕಕಾಲದಲ್ಲಿ ಜಾರಿಯಾಗುವುದರಿಂದ ಅಪರಾಧಿ ಕೇವಲ 20 ವರ್ಷಗಳನ್ನು ಮಾತ್ರ ಶಿಕ್ಷೆ ಅನುಭವಿಸಬೇಕಾಗಿದೆ.

ಭಾರತೀಯ ದಂಡ ಸಂಹಿತೆಯ ಅಡಿ ಮತ್ತು ಬಾಲಾಪರಾಧಿ ಕಾಯಿದೆಯಡಿ ಕಾನೂನುಬಾಹಿರ ಸೆರೆವಾಸಕ್ಕಾಗಿ ಶಿಕ್ಷಕನಿಗೆ ನ್ಯಾಯಾಲಯವು ವಿವಿಧ ಷರತ್ತುಗಳನ್ನು ವಿಧಿಸಿದಲ್ಲದೇ ಇದರೊಂದಿಗೆ 65,000 ರೂಪಾಯಿ ದಂಡವನ್ನೂ ಹಾಕಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎ. ಸಿಂಧು ಅವರ ಪ್ರಕಾರ, ಜನವರಿ 2020 ರಲ್ಲಿ 11 ವರ್ಷದ ಹುಡುಗ ತನ್ನ 50 ವರ್ಷದ ಮದರಸಾ ಶಿಕ್ಷಕರಿಂದ ಲೈಂಗಿಕ ದೌರ್ಜನ್ಯದ ಬಗ್ಗೆ ತನ್ನ ಸ್ನೇಹಿತರಿಗೆ ವಿವರಿಸಿದಾಗ ವಿಷಯವು ಮುನ್ನೆಲೆಗೆ ಬಂದಿದೆ ಎನ್ನಲಾಗಿದೆ.

- Advertisement -

Related news

error: Content is protected !!