Monday, November 9, 2026
spot_imgspot_img
spot_imgspot_img

ಮದ್ಯದ ಅಮಲಿನಲ್ಲಿ ಮಂಗಳಮುಖಿಯೊಂದಿಗೆ ಅಸಭ್ಯ ವರ್ತನೆ; ಸಾರ್ವಜನಿಕವಾಗಿ ಮಂಗಳಮುಖಿಯಿಂದ ಧರ್ಮದೇಟು

- Advertisement -
- Advertisement -

ಮದ್ಯದ ಅಮಲಿನಲ್ಲಿ ಯುವಕನೋರ್ವ ಮಂಗಳಮುಖಿಯೊಂದಿಗೆ ಅಸಭ್ಯ ವರ್ತಿಸಿ ಸಾರ್ವಜನಿಕವಾಗಿ ಧರ್ಮದೇಟು ತಿಂದ ಘಟನೆ ನಡೆದಿದೆ. ಬೆಳಗಾವಿಯ ಜಿಲ್ಲೆಯ ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದ ಬಳಿ ಘಟನೆ ನಡೆದಿದೆ.

ರಾತ್ರಿ ಮನೆಗೆ ಮರಳುತ್ತಿದ್ದ ಮಂಗಳಮುಖಿಗೆ ಅವಾಚ್ಯವಾಗಿ ನಿಂದಿಸಿ ಯುವಕ ಅಸಭ್ಯ ವರ್ತನೆ ಮಾಡಿದ್ದಾನೆ. ಇದನ್ನ ಸಹಿಸಿಕೊಳ್ಳದ ಮಂಗಳಮುಖಿ ಕೂಡಲೇ ಸಾರ್ವಜನಿಕವಾಗಿಯೇ ಧರ್ಮದೇಟು ನೀಡಿದ್ದಾರೆ. ದೇಗುಲಹಳ್ಳಿ ಗ್ರಾಮದ ಯುವಕ ಈ ರೀತಿ ಅಸಭ್ಯವಾಗಿ ತೋರಿದ್ದು, ಕೂಡಲೇ ಯುವಕನನ್ನ ಕಿತ್ತೂರು ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾತ್ರಿಯಾದರೆ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಮಹಿಳೆಯರು, ಮಕ್ಕಳು, ಮಂಗಳಮುಖಿಯರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಇನ್ನಾದರೂ ಪುಂಡರ ವಿರುದ್ಧ ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!