Tuesday, April 30, 2024
spot_imgspot_img
spot_imgspot_img

ಮಲಯಾಳಂನ ಜನಪ್ರಿಯ ನಟ ಇನ್ನೋಸೆಂಟ್ ನಿಧನ

- Advertisement -G L Acharya panikkar
- Advertisement -

ಕೊಚ್ಚಿ: ಮಲಯಾಳಂನ ಜನಪ್ರಿಯ ನಟ ಹಾಗೂ ಮಾಜಿ ಲೋಕಸಭಾ ಸದಸ್ಯ ಇನ್ನೋಸೆಂಟ್ ತಡರಾತ್ರಿ ಕೊಚ್ಚಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು . ಇನ್ನೋಸೆಂಟ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸುಮಾರು 500ಕ್ಕೂ ಹೆಚ್ಚು ಮಲಯಾಳಂ ಚಿತ್ರ ಗಳಲ್ಲಿ ಹಾಸ್ಯ ನಟನಾಗಿ ನಟಿಸಿರುವ ಇನ್ನೋ ಸೆಂಟ್, ಎಡಪಕ್ಷಗಳ ಬೆಂಬಲದೊಂದಿಗೆ ಸ್ವ ತಂತ್ರ ಅಭ್ಯರ್ಥಿಯಾಗಿ ಗೆದ್ದ ನಂತರ 2014 ರಿಂದ 2019 ರವರೆಗೆ ಕೇರಳದ ಚಾಲಕ್ಕು ಡಿ ಲೋಕಸಭಾ ಕ್ಷೇ ತ್ರ ದ ಸಂಸದರಾಗಿ ಕಾರ್ಯನಿರ್ವಹಿಸಿದ್ದ ರು.

ಅವರು ಹಲವಾರು ವರ್ಷಗಳ ಕಾಲ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿ ಸಿದ್ದಾರೆ. 2012 ರಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಬದುಕುಳಿದಿದ್ದರು. ಆದರೆ, ಹಲವಾರು ಆರೋಗ್ಯ ಸಮಸ್ಯೆ‍ಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 3 ರಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

- Advertisement -

Related news

error: Content is protected !!