Tuesday, May 7, 2024
spot_imgspot_img
spot_imgspot_img

ಮಲೆ ಮಹದೇಶ್ವರ ಸ್ವಾಮಿ ಫೇಸ್‌ಬುಕ್‌ ಪೇಜ್‌ ಹ್ಯಾಕ್‌; ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್​ ಮಾಡಿ ವಿಕೃತಿ

- Advertisement -G L Acharya panikkar
- Advertisement -

ಚಾಮರಾಜನಗರ: ಸೆಲೆಬ್ರಿಟಿಗಳ, ರಾಜಕಾರಣಿಗಳ ಫೇಸ್‌ಬುಕ್‌ ಅಕೌಂಟ್ ಗಳನ್ನ ಹ್ಯಾಕ್ ಮಾಡುವುದನ್ನ ನಾವು ನೋಡಿದ್ದೇವೆ ಆದರೆ ದೇವರ ಹೆಸರಿನ ಫೇಸ್‌ಬುಕ್‌ ಪೇಜ್ ಅನ್ನು ಕೂಡ ದುರುಳರು ಹ್ಯಾಕ್ ಮಾಡಿರುವ ಘಟನೆ ನಡೆದಿದೆ. ಮಲೆ ಮಹದೇಶ್ವರ ಸ್ವಾಮಿ ಹೆಸರಿನ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್​ ಮಾಡಿ ವಿಕೃತಿ ಮೆರೆಯಲಾಗಿದೆ.

ಇದೀಗ ಈ ಘಟನೆ ಸಂಬಂಧ ಪೇಜ್​ ಅಡ್ಮಿನ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕೊಳ್ಳೆಗಾಲದ ಸಂಜಯ್ ಎಂಬುವವರು 2013ರಲ್ಲಿ ಮಹದೇಶ್ವರ ಸ್ವಾಮಿ ಫೇಸ್​​ಬುಕ್​​ ಪೇಜ್​​ ಅನ್ನು ಕ್ರಿಯೇಟ್ ಮಾಡಿದ್ದರು. ಈ ಪೇಜ್ ನಲ್ಲಿ ಮಹದೇಶ್ವರ ಸ್ವಾಮಿ ಮಹಿಮೆ, ಪೂಜೆ ಪುನಸ್ಕಾರಗಳ ಮಾಹಿತಿಯನ್ನ ಅಪ್ಲೋಡ್ ಮಾಡಿ ಭಕ್ತರಿಗೆ ಮಾಹಿತಿ ನೀಡಲಾಗಿತ್ತು. ಈ ಪೇಜ್​​ ಗೆ ಸುಮಾರು 17 ಸಾವಿರ ಹಿಂಬಾಲಕರಿದ್ದು, ಸದ್ಯ ಫೇಸ್​​ಬುಕ್​​ ಪೇಜ್​​ ಅನ್ನು ಹ್ಯಾಕ್​ ಮಾಡಿ ಪುಟದ ಸ್ಟೇಟಸ್​​ ಗಳಲ್ಲಿ ಪೋರ್ನ್​ ವಿಡಿಯೋಗನ್ನು ಅಪ್​ ಲೋಡ್​ ಮಾಡಿ ವಿಕೃತಿ ಮೆರೆಯಲಾಗಿದೆ. ಆ ಮೂಲಕ ಮಹದೇಶ್ವರನ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಿದ್ದಾರೆ.

ಈ ಬಗ್ಗೆ ಸಂಜಯ್ ಅವರು, ಚಾಮರಾಜನಗರ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು 30 ಜನರಿಂದ ಪೇಜ್​ ಬಗ್ಗೆ ರಿಪೋರ್ಟ್ ಮಾಡಿಸಲು ಹೇಳಿ ಸುಮ್ಮನಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಪೇಜ್ ಅಡ್ಮಿನ್ ಸಂಜಯ್​ ಪೇಜ್​ ಅನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದಂತೆ ಹ್ಯಾಕರ್​ ಗಳು ಮಾಡಿದ್ದು, ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!