Wednesday, May 1, 2024
spot_imgspot_img
spot_imgspot_img

ಮಹಿಳೆಯರು ಪುರುಷ ಒಡನಾಡಿ ಇಲ್ಲದೆಯೇ ಹಜ್‌ ಅಥವಾ ಉಮ್ರಾ ಕೈಗೊಳ್ಳಬಹುದು; ಸೌದಿ ಅರೇಬಿಯಾ ಸರ್ಕಾರ ಮಹತ್ವದ ಆದೇಶ

- Advertisement -G L Acharya panikkar
- Advertisement -

ನವದೆಹಲಿ: ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಕನಸಿರುವ ಮಹಿಳೆಯರಿಗೆ ಸೌದಿ ಅರೇಬಿಯಾ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಸೌದಿ ಅರೇಬಿಯಾದಲ್ಲಿ ಮಹಿಳೆಯರು ಮೆಹ್ರಾಮ್ (ಪುರುಷ ಒಡನಾಡಿ) ಇಲ್ಲದಯೇ ಹಜ್‌ ಅಥವಾ ಉಮ್ರಾ ಯಾತ್ರೆ ಕೈಗೊಳ್ಳಬಹುದು

ಸೌದಿಯ ಹಜ್ ಮತ್ತು ಉಮ್ರಾ ಸೇವೆಗಳ ಸಲಹೆಗಾರ ಅಹ್ಮದ್‌ ಸಲೇಹ್ ಹಲಾಬಿ ಅವರು ಈ ಘೋಷಣೆ ಮಾಡಿದ್ದಾರೆ.

ಅದರಂತೆ, ಇನ್ನು ಪುರುಷ ಒಡನಾಡಿಯಿಲ್ಲದೆ ಮಹಿಳೆಯರು ಯಾತ್ರೆ ಕೈಗೊಳ್ಳಬಹುದು ಯಾತ್ರೆಗೆಂದು ಬರುವ ಎಲ್ಲ ಮಹಿಳೆಯರಿಗೂ ಪೂರ್ಣ ಪ್ರಮಾಣದಲ್ಲಿ ಸುರಕ್ಷತೆ ಒದಗಿಸುವ ಉದ್ದೇಶದಿಂದ ಎಲ್ಲ ಮಾದರಿಯ ಸಾರಿಗೆ ವ್ಯವಸೆಗಳು, ಬಂದರುಗಳು ಸೇರಿದಂತೆ ಸೌದಿ ಅರೇಬಿಯಾದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಈ ಮೂಲಕ ಮಹಿಳೆಯರಿಗೆ ಹಜ್ ಯಾತ್ರೆ ಕೈಗೊಳ್ಳಲು ಮೆಹ್ರಾಮ್‌ನ ಅಗತ್ಯವಿದೆಯೇ ಎಂಬ ಚರ್ಚೆಗೆ ಸೌದಿ ಸರ್ಕಾರ ತೆರೆ ಎಳೆದಿದೆ.

ಹಜ್ ಯಾತ್ರೆಗೆ ಗಲ್ಫ್ ರಾಷ್ಟ್ರಕ್ಕೆ ಪ್ರಯಾಣಿಸುವ ಮಹಿಳೆಯರು ಈಗ ಮೆಹ್ರಾಮ್ (ಪುರುಷ ರಕ್ಷಕರು) ಇಲ್ಲದೆ ಬರಬಹುದು ವರದಿ ಮಾಡಿದೆ. ಕಳೆದ ವರ್ಷವೂ ಪುರುಷರ ರಕ್ಷಣೆ ಇಲ್ಲದೆ ಮಹಿಳೆಯರಿಗೆ ಹಜ್ ಯಾತ್ರೆಗೆ ಬರಲು ಅನುಮ ನೀಡಲಾಗಿತ್ತು. ನಂತರ ಮಹಿಳೆಯರು ಇನ್ನೊಬ್ಬ ಮಹಿಳೆಯೊಂದಿಗೆ ಬರಬಹುದು ಎಂದು ಸೂಚಿಸಲಾಗಿತ್ತು. ಆದರೆ, ಈ ವರ್ಷದ ಆದೇಶದಲ್ಲಿ ಮಹಿಳೆಯರೂ ಒಂಟಿಯಾಗಿ ಹಜ್‌ ತೀರ್ಥಯಾತ್ರೆಗೆ ಬರಬಹುದು. ಮಹಿಳೆಯರು ಯಾವುದೇ ರೀತಿಯ ವೀಸಾದೊಂದಿಗೆ ಹಜ್‌ ಯಾತ್ರೆಗೆ ಸೌದಿ ಅರೇಬಿಯಾಕ್ಕೆ ಬರಬಹುದು ಎಂದು ಹೇಳಲಾಗಿದೆ.

- Advertisement -

Related news

error: Content is protected !!