Monday, May 6, 2024
spot_imgspot_img
spot_imgspot_img

ಮಹಿಳೆಯೊಂದಿಗೆ ನಾಲ್ವರು ವೃದ್ದರ ಲವ್ವಿಡವ್ವಿ; ಪ್ರಪೋಸ್ ಮಾಡಿದ 5ನೇ ವೃದ್ಧನ ಕೊಲೆ

- Advertisement -G L Acharya panikkar
- Advertisement -

ಬಿಹಾರ: ವಿಧವೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ನಾಲ್ವರು ವೃದ್ದರು ಆ ಮಹಿಳೆಯನ್ನು ಪ್ರಪೋಸ್ ಮಾಡಿದ 5ನೇ ಅಜ್ಜನನ್ನು ಮಹಿಳೆಯೊಂದಿಗೆ ಸೇರಿ ಕೊಲೆಗೈದ ಘಟನೆ ಬಿಹಾರದ ನಳಂದಾದ ಜಿಲ್ಲೆಯಲ್ಲಿ ನಡೆದಿದೆ.

ಅಸ್ತವಾ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ವಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ಪ್ರೇಮಕಥೆಯನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ. ಬಲ್ವಾಪುರ ಗ್ರಾಮದಲ್ಲಿ ಚಹಾದಂಗಡಿ ನಡೆಸುತ್ತಿದ್ದ 32 ವರ್ಷದ ವಿಧವೆಯನ್ನು ಅದೇ ಗ್ರಾಮದ ನಾಲ್ವರು ವಯೋವೃದ್ದರು ಪ್ರೀತಿಸುತ್ತಿದ್ದರು. ಈ ನಡುವೆ ಐದನೇ ವೃದ್ದ 70 ವರ್ಷದ ತ್ರಿಪಿತ್ ಶರ್ಮಾ ಎಂಬ ವೃದ್ದ ಕೂಡಾ ಆ ಮಹಿಳೆಯಲ್ಲಿ ತನ್ನನ್ನು ಪ್ರೀತಿಸುವಂತೆ ಕೇಳಿಕೊಂಡಿದ್ದಾರೆ. ಇದನ್ನು ಮಹಿಳೆ ತನ್ನ ಇತರು ನಾಲ್ವರು ಪ್ರೇಮಿಗಳಲ್ಲಿ ಹೇಳಿಕೊಂಡಿದ್ದು, ತ್ರಿಪಿತ್ ಶರ್ಮಾನ ಎಂಟ್ರಿಯನ್ನು ನಾಲ್ವರು ವೃದ್ದರು ಸಹಿಸದಾಗಿದ್ದಾರೆ.

ಹೀಗಾಗಿ ಮಹಿಳೆ ಸಹಿತ ಐವರು ಸೇರಿ ತ್ರಿಪಿತ್ ಶರ್ಮಾನನ್ನು ಕೊಲೆ ಮಾಡಲು ಸಂಚು ರೂಪಿಸಿ ಆತನನ್ನು ಅಕ್ಟೋಬರ್ 19 ರಂದು ನಿರ್ಜನ ಸ್ಥಳಕ್ಕೆ ಕರೆದೊಯ್ದು ಕೊಲೆ ಮಾಡಿ ಮೃತದೇಹವನ್ನು ಹೊಸದಾಗಿ ನಿರ್ಮಿಸಿರುವ ಸಮುದಾಯ ಭವನದ ಟ್ಯಾಂಕ್‌ನೊಳಗೆ ಎಸೆದಿದ್ದಾರೆ. ಇದಕ್ಕೂ ಮುನ್ನ ಆತನ ಗುರುತು ಪತ್ತೆಯಾಗದಿರಲೆಂದು ಮುಖವನ್ನು ಕಲ್ಲಿನಿಂದ ಜಜ್ಜಿದ್ದರು.

ಬಳಿಕ ಮೃತದೇಹ ಪತ್ತೆಯಾದ ಕೂಡಲೇ ಶರ್ಮಾ ಪುತ್ರ ಮಿಥುಕುಮಾರ್ ಆಸ್ತಾವನ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಶರ್ಮಾ ಮಹಿಳೆಯ ಟೀ ಅಂಗಡಿಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ ಬಗ್ಗೆ ಮಾಹಿತಿ ದೊರೆತಿತ್ತು. ಆದರೆ ಅವರ ಮೊಬೈಲ್ ಫೋನ್ ಆ ಸಮಯದಲ್ಲಿ ಸ್ವಿಚ್‌ ಆಫ್ ಆಗಿದ್ದು, ಒಂದು ತಿಂಗಳು ಕಳೆದ ನಂತರ ಆನ್ ಆಗಿತ್ತು. ಮೊಬೈಲ್ ಫೋನ್ ಆನ್‌ ಆಗುತ್ತಿದ್ದಂತೆ ಮಹಿಳೆ ಮತ್ತು ಮೊಬೈಲ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಮಹಿಳೆ ತನ್ನ ಪ್ರೇಮಕಥೆಯನ್ನು ಪೊಲೀಸರೆದುರು ಬಾಯ್ಬಿಟ್ಟಿದ್ದು, ಪೊಲೀಸರೇ ದಂಗಾಗಿದ್ದಾರೆ. ಆಕೆಯ ಹೇಳಿಕೆ ಆಧರಿಸಿ ನಾಲ್ವರು ವೃದ್ದ ಪ್ರೇಮಿಗಳನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!